ಸುದ್ದಿ ಕನ್ನಡ ವಾರ್ತೆ

ಚಿಕ್ಕೋಡಿ:ಗಣಪತಿ ಬಪ್ಪಾ ಮೋರಯಾ..ಗಣೇಶ ಗಣೇಶ ಮೋರಯಾ ಎಂಬ ಯುವಕರ ಘೋಷಣೆಗಳೊಂದಿಗೆ ಚಿಕ್ಕೋಡಿ ನಗರದ ಸಾರ್ವಜನಿಕರು ಗಣಪತಿಗೆ ವಿದಾಯ ಹೇಳಿದರು.

ಕಳೆದ ಸೆ.7 ರಂದು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳ ವಿಸರ್ಜನೆ ಮಂಗಳವಾರ ಅದ್ದೂರಿಯಾಗಿ ನಡೆಯಿತು. ಪುರಸಭೆ.ಪೊಲೀಸ್ ಇಲಾಖೆ.ಕಂದಾಯ ಮತ್ತು ವಿವಿಧ ಗಣಪತಿ ಮಂಡಳದ ಮುಖಂಡರ ಸಮ್ಮುಖದಲ್ಲಿ ಏಕಕಾಲಕ್ಕೆ ಚಿಕ್ಕೋಡಿ ನಗರದ ಗಣೇಶ ಮೂರ್ತಿಗಳ ವಿಸರ್ಜನೆ ನಡೆದಿರುವುದು ವಿಶೇಷವಾಗಿತ್ತು.

ಬಸ್ ನಿಲ್ದಾಣ ಹತ್ತಿರ ಎಲ್ಲ ಗಣೇಶ ಮಂಡಳದ ಮೂರ್ತಿಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ಚರಮೂರ್ತಿಮಠದ ಸಂಪಾದನ ಸ್ವಾಮೀಜಿ ವಿಸರ್ಜನೆ ಮೆರವಣಿಗೆ ಚಾಲನೆ ನೀಡಿದ ಬಳಿಕ ಸಾಲು ಸಾಲಾಗಿ ಮೂರ್ತಿಗಳು ಸಾಗಿದವು.

ಡಿಜೆಗೆ ಹೆಜ್ಜೆ ಹಾಕಿದ ಯುವಕ- ಯುವತಿಯರು: ಏಕಕಾಲಕ್ಕೆ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಚಿಕ್ಕೋಡಿ ಹಾಗೂ ಸುತ್ತಮುತ್ತಿಲಿನ ಯುವಕ- ಯುವತಿಯರು ಕುಣಿದು ಕುಪ್ಪಳಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ ಪಿ ಗೋಪಾಲಕೃಷ್ಣ ಗೌಡರ ನೇತೃತ್ವದಲ್ಲಿ ಬೀಗಿ ಬಂದೋಬಸ್ತ ಕಲ್ಪಿಸಿದರು.
ಸರ್ಕಾರದಿಂದ ಗಣೇಶ ಮೂರ್ತಿ ಬಿಳ್ಕೋಡಗೆ: ಗಣೇಶ ಮೂರ್ತಿಗಳು ಪುರಸಭೆ ಹತ್ತಿರ ಆಗಮೀಸಿದಾಗ ಪುರಸಭೆ.‌ಪೊಲೀಸ್. ಕಂದಾಯ ಇಲಾಖೆ ಅಧಿಕಾರಿಗಳು ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪನೆ ನೇರವೇರಿಸಿ ಬಿಳ್ಕೋಟ್ಟರು.

ಈ ಸಂದರ್ಭದಲ್ಲಿ ಚರಮೂರ್ತಿಮಠದ ಸಂಪಾದನ ಸ್ವಾಮೀಜಿ. ದುರೀಣ ಜಗದೀಶ ಕವಟಗಿಮಠ. ಪುರಸಭೆ ಅಧ್ಯಕ್ಷ ವೀಣಾ ಕವಟಗಿಮಠ. ಉಪಾಧ್ಯಕ್ಷ ಇರ್ಫಾನ ಬೇಪಾರಿ.ಸಂಜಯ ಕವಟಗಿಮಠ. ಪ್ರವೀಣ ಕಾಂಬಳೆ. ವಿಶ್ವನಾಥ ಕಾಮಗೌಡ. ರಾಜು ಸಂಕೇಶ್ವರಿ. ಅನಿಲ‌ ಮೋರೆ. ಸಂತೋಷ ಟವಳೆ. ಬಾಬು ಮಿರ್ಜೆ. ಅಜಯ ಕವಟಗಿಮಠ. ಶಿವಜೀತ ಮಿರ್ಜೆ. ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ. ತಹಶಿಲ್ದಾರ ಸಿ.ಎಸ್.ಕುಲಕರ್ಣಿ. ಸಿಪಿಐ ವಿಶ್ವನಾಥ ಚೌಗಲೆ ಮುಂತಾದವರು ಇದ್ದರು.