ಸುದ್ಧಿಕನ್ನಡ ವಾರ್ತೆ
ಸ್ಟಾರ್ ನಟರು ಇಲ್ಲದೆಯೇ ಸಿನಿಮಾ ಗೆಲ್ಲುವುದೇ ಇಲ್ಲ ಎನ್ನುವ ಸಮಯದಲ್ಲಿ ಯಾವುದೇ ಸ್ಟಾರ್ ನಟರನ್ನು ಹಾಕಿಕೊಳ್ಳದೆಯೇ ಸಿನಿಮಾ ಮಾಡಿದ “ಸು ಫ್ರಮ್ ಸೋ” ಸಿನಿಮಾ ಎಲ್ಕೆಡೆ ಭರ್ಜರಿ ಸದ್ಧು ಮಾಡುತ್ತಿದೆ. ರಾಜ್ ಬಿ ಶೆಟ್ಟಿ ರವರು ನಿರ್ಮಿಸಿದ ಜೆಪಿ ತುಮಿನಾಡ್ ನಿರ್ದೇಶಿಸಿದ ಈ ಚಿತ್ರ ಬಾಕ್ಸ ಆಫಿಟ್ ಹಿಟ್ ಚಿತ್ರವಾಗಿದೆ. ದಿದದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುವಲ್ಲಿ ಈ ಚಿತ್ರ ಯಶಸ್ವೊಯಾಗಿದೆ. ಈ ಚಿತ್ರ ಕರ್ನಾಟಕದಲ್ಲಿ ಧೂಳೆಬ್ಬಿಸುತ್ತಿರುವುದು ಮಾತ್ರವಲ್ಕದೆಯೇ ಹೊರನಾಡು ಗೋವಾದಲ್ಲಿ ಕೂಡ ಚಿತ್ರಮಂದಿರ ಹೌಸ್ ಫುಲ್ ಆಗುತ್ತಿರುವುದು ವಿಶೇಷ.

ಹೌದು ಗೋವಾ ರಾಜ್ಯದ ಪಣಜಿಯ ಐನಾಕ್ಸ, ಪರ್ವರಿಯ ಐನಾಕ್ಸ, ಮಡಗಾಂವ ಐನಾಕ್ಸ ಚಿತ್ರಮಂದಿರದಲ್ಲಿ ಸದ್ಯ ಪ್ರದರ್ಶನ ಕಾಣುತ್ತಿದ್ದು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಗೋವಾದಲ್ಲಿ ಈ “ಶುಫ್ರಮ್ ಸೋ” ಚಲನಚಿತ್ರಕ್ಕೆ ಮುಂಗಡವಾಗಿ ಟಿಕೇಟ್ ಬುಕ್ ಮಾಡುತ್ತಿರುವುದು ವಿಶೇಷವಾಗಿದೆ. ಗೋವಾದ ಈ ಎಲ್ಲ ಚಿತ್ರ ಮಂದಿರಗಳಲ್ಲಿ ಭಾರಿ ಯಶಸ್ವಿ ಪ್ರದರ್ಶನ ಮುಂದುವರೆದಿದೆ.

ವಿಶ್ವದಾದ್ಯಂತ ಈಗಾಗಲೇ ಈ ಚಿತ್ರವು 36 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. 1 ಮಿಲಿಯನ್ ಗೂ ಅಧಿಕ ಟಿಕೇಟ್ ಮಾರಾಟ ಕಂಡಿದೆ.
ರಾಜ್ ಬಿ ಶೆಟ್ಟಿ ರವರು ಗುರೂಜಿ ಪಾತ್ರದಲ್ಲಿ ನಟಿಸಿದ್ದಾರೆ. ಅಗಷ್ಟ 1 ರಂದು ವಿದೇಶಿ ಚಿತ್ರಮಂದಿರಗಳಲ್ಲಿಯೂ ಬಿಡುಗಡೆಗೊಂಡಿದೆ. ತೆಲಗು ಡಬ್ಬಿಂಗ್ ಆವೃತ್ತಿಯು ಅಗಷ್ಟ 8 ರಂದು ತೆರೆಗೆ ಬರಲಿದೆ. ಒಟ್ಟಾರೆ “ಸು ಫ್ರಮ್ ಸೋ” ಚಲನಚಿತ್ರ ಕರ್ನಾಟಕ ಮಾತ್ರವಲ್ಲದೆಯೇ ಗೋವಾ ಸೇರಿದಂತೆ ವಿದೇಶದಲ್ಲಿಯೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.