ಸುದ್ಧಿಕನ್ನಡ ವಾರ್ತೆ
ಗೋವಾದ ನೂತನ ರಾಜ್ಯಪಾಲರಾಗಿ ಕೇಂದ್ರ ಮಾಜಿ ಮಂತ್ರಿ ಪಶುಪತಿ ಅಶೋಕ ಗಜಪತಿ ರಾಜು ರವರು ಶನಿವಾರ ಗೋವಾ ರಾಜಭವನದಲ್ಲಿ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ರವರು 14 ಜುಲೈ 2025 ರಂದು ದೇಶಾದ್ಯಂತ ಹಲವು ರಾಜ್ಯಪಾಲರ ಬದಲಾವರಣೆಯ ಒಂದು ಭಾಗವಾಗಿ ಗೋವಾದ ರಾಜ್ಯಪಾಲರನ್ನೂ ಬದಲಾವಣೆ ಮಾಡಲಾಗಿತ್ತು.

ಗೋವಾದ ಮಾಜಿ ರಾಜ್ಯಪಾಲರಾದ ಪಿ.ಎಸ್.ಶ್ರೀಧರನ್ ಪಿಳ್ಳೆ ರವರಿಂದ ಅಶೋಕ ಗಜಪತಿ ರಾಜು ರವರು ಗೋವಾದ ರಾಜ್ಯಪಾಲ ಸ್ಥಾನದ ಜವಾಬ್ದಾರಿ ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕೇಂದ್ರ ನಾಗರೀಕ ವಿಮಾಯಾನ ಮಂತ್ರಿಯಾಗಿ ಮಹತ್ವದ ಜವಾಬ್ದಾರಿ ನಿಭಾಯಿಸಿದ್ದರು.

ಕೇಂದ್ರ ಸರ್ಕಾರದಲ್ಲಿ ಜವಾಬ್ದಾರಿ ಮಾತ್ರವಲ್ಲದೆಯೇ ಅಶೋಕ ಗಜಪತಿ ರಾಜು ರವರು ಆಂಧ್ರಪ್ರದೇಶದ ರಾಜಕೀಯದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು.

ಶನಿವಾರ ಗೋವಾ ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕರಾದ ಸಮಾರಂಭದಲ್ಲಿ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾಪೀಠದ ನ್ಯಾಯಮೂರ್ತಿಗಳು, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮತ್ತಿತರರು ಉಪಸ್ಥಿತರಿದ್ದರು. ನ್ಯಾಯಾಧೀಶರು ನೂತನ ರಾಜ್ಯಪಾಲರಿಗೆ ಪ್ರಮಾಣವಚನ ಬೋಧಿಸಿದರು.

ಪ್ರಮಾಣವಚನ ಸ್ವೀಕರಿಸಿ ನೂತನ ರಾಜ್ಯಪಾಲರಾದ ಅಶೋಕ ಗಜಪತಿ ರಾಜು ಸುದ್ಧಿಗಾರರೊಂದಿಗೆ ಮಾತನಾಡಿ-ಗೋವಾದಲ್ಲಿರುವುದಕ್ಕೆ ಹಾಗೂ ಗೋವಾ ರಾಜ್ಯದ ಜನತೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಂತೋಷವಾಗುತ್ತದೆ. ನನಗೆ ಗೋವಾದ ಸ್ಥಳೀ ಭಾಷೆ ತಿಳಿದಿಲ್ಲಬಹುದು, ಆದರೆ ನನಗೆ ಹೆಚ್ಚಿನ ಅನುಭವವಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಅಗತ್ಯ ಎಂದರು.