ಸುದ್ಧಿಕನ್ನಡ ವಾರ್ತೆ
ಗೋವಾದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕರ್ನಾಟಕದ ಬೆಂಗಳೂರಿನ (Bangalore)ಯುವಕನನ್ನು ಗೋವಾದಲ್ಲಿ ಬಂಧಿಸುವಲ್ಲಿ ಗೋವಾ ಪೋಲಿಸರು ಯಶಸ್ವಿಯಾಗಿದ್ದಾರೆ.

ಗೋವಾದ ಶಿವೋಲಿಯಲ್ಲಿ ಮಾದಕ ಪದಾರ್ಥವಿರೋಧಿ ದಳ ಪೋಲಿಸರು ಗುರುವಾರ ಕಾರ್ಯಾಚರಣೆ ನಡೆಸಿ ಕರ್ನಾಟಕದ ಬೆಂಗಳೂರಿನ ರಾಜನ್ ಶೆಟ್ಟಿಯಾರ್ (32) (Rajan Shettiar) ಎಂಬ ವ್ಯಕ್ತಿಯಿಂದ 429.3 ಗ್ರಾಂ ಚರಸ್ ಜಪ್ತಿ ಮಾಡಿದ್ದಾರೆ. ಈ ಚರ್ ಮೌಲ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 4.30 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಮೂಲದ ರಾಜನ್ ಶೆಟ್ಟಿ ಗೋವಾದ ಶಿವೋಲಿಯಲ್ಲಿ ವಾಸಿಸುತ್ತಿದ್ದ. ಪೋಲಿಸರಿಗೆ ಲಭ್ಯವಾದ ಮಾಹಿತಿಯ ಹಿನ್ನೆಲೆಯಲ್ಲಿ ಆರೋಪಿ ರಾಜನ್ ಶೆಟ್ಟಿಯಾರ್ ಚರಸ್ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿಯೇ ಪೋಲಿಸರು ಬಂಧಿಸಿದ್ದಾರೆ.

ಮಾದಕ ಪದಾರ್ಥ ವನ್ನು ಜಫ್ತಿ ಮಾಡಿ ಬಂಧನ ರಾಜನ್ ವಿರುದ್ಧ ಎಡಿಪಿಎಸ್ ಖಾಯ್ದೆ ಕಲಂ 20 (ಬ)(2) (ಬ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೋಲಿಸ್ ಉಪನಿರೀಕ್ಷಕ ಗಿರೀಶ್ ಪಾಲಯೇಕರ್ ರವರು ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಈ ಕಾರ್ಯಾಚರಣೆರಯಲ್ಲಿ ಪೋಲಿಸ್ ಕಾನ್ ಸ್ಟೆಬಲ್ ಅಕ್ಷಯ ನಾಯ್ಕ, ವೆಂಕಟೇಶ್ ಮಾಯಿಣಕರ್, ತುಷಾರ್ ಪರವಾರ, ದೇವರಾಜ ನಾಯ್ಕ, ಹಾಗೂ ಮಹಿಳಾ ಕಾನ್ ಸ್ಟೆಬಲ್ ಸೀಮಾ ಅರ್ಪಾರಕರ್ ರವರು ಪಾಲ್ಗೊಂಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.