ಸುದ್ಧಿಕನ್ನಡ ವಾರ್ತೆ
ಗೋವಾದ ಸಾಂಗೆಯಲ್ಲಿ ಮೋಸವೆಸಗಿ ಭಾರಿ ಪ್ರಮಾಣದಲ್ಲಿ ಹಣವನ್ನು ದೋಚಿದ (Grab the money)ಆತಂಕಕಾಗಿ ಘಟನೆ ಬೆಳಕಿಗೆ ಬಂದಿದೆ. ಭಾರಿ ಪ್ರಮಾಣದ ಸಾಲ ಕೊಡಿಸುವುದಾಗಿ ಹೇಳಿ ಕರ್ನಾಟಕ (Karnataka )ಮೂಲದ 5 ಜನರ ತಂಡ ಗೋವಾದಿಂದ ಕೋಟ್ಯಂತರ ರೂ ದೋಚಿರುವ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಗೋವಾ ಸಾಂಗೆ ಪೋಲಿಸರು ಕರ್ನಾಟಕದ ಮಂಗಳೂರಿನ ( Karnataka Mangalore) 5 ಜನ ಶಂಕಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಲಬಿಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕ ಪಿಯುಷ್ ರವರು ಪೋಲಿಸ್ ದೂರು ದಾಖಲಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ಮಂಗಳೂರು ಮೂಲದ ಶಂಕಿತ ಆರೋಪಿಗಳು ಗೋವಾದ ಕಂಪನಿಯ ಮಾಲೀಕ ಪಿಯುಷ್ ರವರಿಗೆ ದೊಡ್ಡ ಮೊತ್ತದ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ ಸ್ಟಾಂಪ್ ಡ್ಯುಟಿ ಹಾಗೂ ಇತರ ಪ್ರಕ್ರಿಯೆಯ ಖರ್ಚಿನ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾರೆ. ಒಟ್ಟೂ 1 ಕೋಟಿ 85 ಲಕ್ಷ ಪಡೆದ ನಂತರ ಗೋವಾ ಕಂಪನಿಯ ಮಾಲೀಕ ಪಿಯುಷ್ ರವರ ಸಂಪರ್ಕಕ್ಕೆ ಸಿಗದಂತಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಗೋವಾ ಪೋಲಿಸರು ಯೋಗೇಶ್ ಸಾವಂತ್, ಜಯಸ್ವಾಲ್, ರೋಶನ್ ಸಾಲ್ಡಾನಾ, ಆರ್.ಕೆ.ನಾಯರ್, ರೆಡ್ಡಿ ಎಂಬ ಐದು ಜನ ಮಂಗಳೂರು ಮೂಲದವರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೋಲಿಸರು ಶಂಕಿತ ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಇತ್ತೋಚಿನ ದಿನಗಳಲ್ಲಿ ಇಂತಹ ಆಮಿಷವೊಡ್ಡಿ ಮೋಸ ಮಾಡುವ ಜಾಲ ಹೆಚ್ಚುತ್ತಿದೆ. ಇದರಿಂದಾಗಿ ಜನತೆ ಎಚ್ಚೆತ್ತು ಇಂತವರಿಂದ ಮೋಸ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕೆ ಎಂದು ಪೋಲಿಸರು ಜನತೆಗೆ ಸೂಚನೆ ನೀಡಿದ್ದಾರೆ.