ಸುದ್ಧಿಕನ್ನಡ ವಾರ್ತೆ
ಶಿರಸಿ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಕೆಡಿಸಿಸಿಗೆ‌ ಪ್ರಸಕ್ತ ಸಾಲಿನಲ್ಲಿ ೨೩.೦೪ ಕೋಟಿ ರೂಪಾಯಿ ನಿವ್ವಳ ಲಾಭವಾಗಿದೆ.
ಪ್ರಧಾನ ಕಚೇರಿಯ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿದ ಶಾಸಕ, ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್,‌ ಶೇರು ಬಂಡವಾಳ ೧೧೦.೩೯ ಕೋ.ರೂ.ದಿಂದ ೧೩೧.೨೮ ಕೋ.ರೂ.ಗೆ ಏರಿಕೆ ಆಗಿದೆ. ನಿಧಿ ೨೪೨.೩೧ ಕೋಟಿ.ರೂ.ದಿಂದ ೩೨೪.೦೮ ಕೋ.ರೂ.ಗೆ, ಠೇವುಗಳು ೩೦೫೭.೦೮ ಕೋ.ರೂ.ದಿಂದ ೩೩೩೩.೪೧ ಕೋಟಿ ರೂ.ಗೆ ಏರಿಕೆ ಆಗಿದೆ. ಸಾಲಬಾಕಿ ೩೦೯೭.೯೫ ಕೋ.ರೂ. ಇದೆ. ದುಡಿಯುವ ಬಂಡವಾಳ ೪೫೧೫.೮೧ ಕೋ.ರೂ.ಗೆ ತಲುಪಿದೆ ಎಂದರು.
ಜಿಲ್ಲೆಯಲ್ಲಿ ಬ್ಯಾಂಕ್ ೭೪ ಶಾಖೆಗಳಿದ್ದು, ಸಾಲ ವಸೂಲಾತಿ ಪ್ರಮಾಣ ಶೇ.೯೮.೦೨ ಕೋಟಿ.ರೂ. ಆಗಿದೆ. ೧೫೭.೭೦ ಲಕ್ಷ ರೂ. ಯಶಸ್ವಿನಿ ಕಂತು ಕಟ್ಟಲಾಗಿದೆ. ೪೧.೦೪ ಕೋ.ರೂ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ನೆರವು ಬಂದಿದೆ. ಕೃಷಿ ಭೂಮಿ ಖರೀದಿಗೆ ೮೫ ಗ್ರಾಹಕರಿಗೆ ೨೦೩೩.೬೨ ಲ.ರೂ ನೀಡಲಾಗಿದೆ. ಶಿಕ್ಷಣ ಸಾಲ ೩೮ ವಿದ್ಯಾರ್ಥಿಗಳಿಗೆ ೪೪೫.೫೧ ಲ
ರೂ., ಔದ್ಯೋಗಿಕರಣಕ್ಕೆ ೧೨ ಘಟನಗಳಿಗೆ ೨೦೮.೩೮ ಲ.ರೂ, ಹೈನುಗಾರಿಕೆಗೆ ೧೨೫೯ ರೈತರಿಗೆ ೬೩೮.೭೬ ಲ.ರೂ.ಸಾಲ ಮಂಜೂರಿಯಾಗಿದೆ ಎಂದರು.
ಫಾರಂ ಹೌಸ್ಗೆ ೧೯೫ ರೈತರಿಗೆ ೪೩೩೧.೫೩ ಲ.ರೂ.ಸಾಲ ನೀಡಲಾಗಿದೆ. ೧೯೨೦ರಲ್ಲಿ ಸ್ಥಾಪಿತ ಬ್ಯಾಂಕ್ ಗೆ ೧೦೫ವರ್ಷಕ್ಕೆ ಪಾದಾರ್ಪಣೆ ಮಾಡಲಾಗಿದೆ. ಒಟ್ಟೂ ಆದಾಯ ೩೯೨.೧೦ ಕೋ.ರೂ. ಆಗಿದೆ ಎಂದರು.
ಸಾಲಗಾರರ ಜೊತೆ ಡಿಪೊಸಿಟ್ ದಾರರ ರಕ್ಷಣೆ ಮಾಡಬೇಕಿದೆ. ಲಾಭದ ಹಾದಿಯಲ್ಲಿ ದಾಪುಗಾಲು ಇಟ್ಟಿದ್ದೇವೆ. ೧೮೬ ಸ್ವಸಹಾಯ ಸಂಘ ಮಾಡಲಾಗಿದೆ. ಪ್ರಾರಂಭದಿಂದಲೂ ಅ ವರ್ಗದಲ್ಲಿದೆ. ಈ ಮಧ್ಯೆ ಕೃಷಿ ಸಾಲ ಕೊಡುವದು ಬದ್ಧತೆ ಇದೆ. ಎಂದರು.
ಕೊಡುವಾಗ ಇರುವ ಬದ್ಧತೆ, ಸಾಲ ವಸೂಲಾತಿಯನ್ನೂ ಮಾಡುತ್ತೇವೆ. ಸಾಲ ವಸೂಲಾತಿ ಮಾಡಲು ಯಾವುದೇ ರಾಜಿ ಇಲ್ಲ. ಚೀಟರ್ ಎಲ್ಲ ಕಡೆ ಇರತಾರೆ. ಹಾಗಂತ ಅಪಘಾತ ಆಗಿದೆ ಎಂದು ವಾಹನ ಓಡಿಸುವದು ಬಿಡುವದಲ್ಲ ಎಂದರು.
ಈ ವೇಳೆ ಮಾಜಿ ಅಧ್ಯಕ್ಷ ಶ್ರೀಕಾಂತ ಘೋಟ್ನೇಕರ್, ಉಪಾಧ್ಯಕ್ಷ
ಮೋಹನದಾಸ ನಾಯ್ಕ, ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಜಿ
.ಆರ್ ಹೆಗಡೆ‌ ಸೋಂದಾ, ರಾಘವೇಂದ್ರ ಶಾಸ್ತ್ರೀ, ಗುನಗಿ, ತಿಮ್ಮಯ್ಯ ಹೆಗಡೆ, ಬಾಬು ಸುಂಕೇರಿ,
ವಿಶ್ವನಾಥ ಭಟ್ಟ, ಆರ್.ಎಂ.ಹೆಗಡೆ, ರಾಮಕೃಷ್ಣ ಹೆಗಡೆ, ವ್ಯವಸ್ಥಾಪಕ ನಿರ್ದೇಶಕ  ಶ್ರೀಕಾಂತ  ಭಟ್ಟ ಸೋಮಸಾಗರ ಇದ್ದರು.