ಸುದ್ಧಿಕನ್ನಡ ವಾರ್ತೆ
ಗೋವಾದ ಜಲಸಾರಿಗೆ ಇತಿಹಾಸದಲ್ಲಿಯೇ ಇದು ಸುವರ್ಣಾಕ್ಷರದಲ್ಲಿ ಬರೆದಿಡುವ ವಿಶೇಷ ಸಂದರ್ಭ. ದೇಶದಲ್ಲಿಯೇ ಪ್ರಪ್ರಥಮ ಎನ್ನಲಾದ ರೋ ರೋ ಬೋಟ್ ಸೇವೆ ಗೋವಾದಲ್ಲಿ ಶುಭಾರಂಭಗೊಂಡಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಸೋಮವಾರ ರೋ ರೋ ಬೋಟ್ ಸೇವೆಗೆ ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ- ಗೋವಾ ಸರ್ಕಾರವು ಕೇವಲ ರಸ್ತೆ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಮಾತ್ರವಲ್ಲದೆಯೇ ಇತರ ಕ್ಷೇತ್ರದಲ್ಲಿಯೂ ಹೆಚ್ಚಿನ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳುತ್ತಿದೆ. ಜನತೆಗೆ ಅತ್ಯಾಧುನಿಕ ಸೇವೆ ಲಭಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕಂಕಣ ಬದ್ಧವಾಗಿದೆ. ಗೋವಾದಲ್ಲಿ ಇನ್ನೂ 8 ಸ್ಥಳಗಳಲ್ಲಿ ಫೇರಿ ಬೋಟ್ ಓಡಾಟ ನಡೆಯುತ್ತಿದೆ. ಅಲ್ಲಿಯೂ ಕೂಡ ಮುಂಬರುವ ದಿನಗಳಲ್ಲಿ ರೋ ರೋ ಬೋಟ್ ಸೇವೆಯನ್ನು ಶಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದರು.
ಗೋವಾರ ರಾಯಬಂದರ್ ನಲ್ಲಿ ರೋ ರೋ ಬೋಟ್ ಸೇವೆಯ ದರವನ್ನು ಸರ್ಕಾರ ನಿಗಧಿಪಡಿಸಿದೆ. ರೋ ರೋ ಬೋಟ್ ನಲ್ಲಿ ಪ್ರಯಾಣಿಕರಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಉಚಿತವಾಗಿ ಓಡಾಟ ನಡೆಸಲು ಸರ್ಕಾರ ಅವಕಾಶ ಕಲ್ಪಿಸಿದೆ. ನಾಲ್ಕು ಚಕ್ರದ ವಾಹನಗಳಿಗೆ 30 ರೂ ಶುಲ್ಕ ನಿಗಧಿಪಡಿಸಿದೆ.