ಸುದ್ಧಿಕನ್ನಡ ವಾರ್ತೆ
ಗೋವಾ ರಾಜ್ಯ ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಇಲ್ಲಿ ಬಹುತೇಕರು ಎರಡನೇಯ ಮನೆ ( Second home ) ಹೊಂದಲು ಬಯಸುತ್ತಾರೆ. ಇದರಿಂದಾಗಿ ಕಳೆದ ಕೆಲ ವರ್ಷಗಳಿಂದ ಗೋವಾದಲ್ಲಿ ಸೈಟು ಮತ್ತು ಪ್ಲ್ಯಾಟ್ ದರ ( Site and plot price) ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಕಂಡುಬಂದಿದೆ. ಗೋವಾ ನಿರ್ಮಾಣ ಕ್ಷೇತ್ರದಲ್ಲಿ ದೇಶದಿಂದ ಮಾತ್ರವಲ್ಲದೆ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಂದಲೂ ಭಾರಿ ಹೂಡಿಕೆಗೆ ಸಾಕ್ಷಿಯಾಗಿದೆ. ಇದರಿಂದಾಗಿ, ಗೋವಾ ‘ಸ್ಮಾರ್ಟ್ ಹೂಡಿಕೆ ತಾಣ’ವಾಗಿ ಮಾರ್ಪಟ್ಟಿದೆ.
ವಿಶೇಷವಾಗಿ ಕೊರೊನಾ (Covid) ಅಲೆಯ ನಂತರ, ಮನೆಯಿಂದ ಕೆಲಸ ಮಾಡುವ ಸಂಸ್ಕøತಿಯಿಂದಾಗಿ ಅನೇಕರು ಗೋವಾದಲ್ಲಿ ಆಸ್ತಿಯನ್ನು ಖರೀದಿಸಲು ಆದ್ಯತೆ ನೀಡಿದ್ದಾರೆ. ಆನ್ಲೈನ್ ರಿಯಲ್ ಎಸ್ಟೇಟ್ ಗಳು (Real estate) ಗೋವಾದಲ್ಲಿ ಮನೆ ಬೆಲೆಗಳು ಶೇಕಡಾ 66.3 ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ. ಮನೆ ಮತ್ತು ಭೂಮಿ ಖರೀದಿಯ ಜೊತೆಗೆ, ಗೋವಾದಲ್ಲಿ ಅಲ್ಪಾವಧಿಯ ಬಾಡಿಗೆ ಮಾರುಕಟ್ಟೆಯೂ ಪ್ರವರ್ಧಮಾನಕ್ಕೆ ಬಂದಿದೆ. ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ ಆಸ್ತಿ ಬೆಲೆಗಳು ತೀವ್ರವಾಗಿ ಹೆಚ್ಚಿವೆ ಮತ್ತು ಐಷಾರಾಮಿ ವಿಲ್ಲಾಗಳು ಮತ್ತು ಪ್ರೀಮಿಯಂ ಅಪಾರ್ಟ್ಮೆಂಟ್ ಗಳ ಬೇಡಿಕೆಯೂ ವೇಗವಾಗಿ ಹೆಚ್ಚುತ್ತಿದೆ. ಗೋವಾದಲ್ಲಿ ಮನೆ ಮಾರಾಟದ ಸಂಖ್ಯೆ 9.43 ರಷ್ಟು ಹೆಚ್ಚಾಗಿದೆ. ರಿಯಲ್ ಎಸ್ಟೇಟ್(Real estate) ಡೇಟಾ ವಿಶ್ಲೇಷಣಾ ಕಂಪನಿಯೊಂದರ ವರದಿಯ ಪ್ರಕಾರ, ಮಾರಾಟ ಮೌಲ್ಯದಲ್ಲಿ ಶೇಕಡಾ 17 ರಷ್ಟು ಹೆಚ್ಚಳ ದಾಖಲಾಗಿದೆ. ಗೋವಾದ ಪರ್ವರಿಯಲ್ಲಿ ಮನೆ ಬೆಲೆಗಳಲ್ಲಿ ಶೇಕಡಾ 51.69 ರಷ್ಟು ಹೆಚ್ಚಳದೊಂದಿಗೆ ಮುಂಚೂಣಿಯಲ್ಲಿದೆ. ಗೋವಾದ ಕಾಂದೋಲಿಂನಲ್ಲಿ ಶೇಕಡಾ 42.79 ರಷ್ಟಿದ್ದರೆ, ಕಾರಂಜಾಲೆ ಶೇಕಡಾ 9 ರಷ್ಟಿದೆ.
ದಕ್ಷಿಣ ಗೋವಾದಲ್ಲಿ ದಾಬೋಲಿಮ್ ಮತ್ತು ಉತ್ತರ ಗೋವಾದಲ್ಲಿ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಹಾಗೂ ಗೋವಾ-ಮುಂಬೈ ಹೆದ್ದಾರಿಯ ವಿಸ್ತರಣೆಯು ಈ ಮಾರ್ಗದಲ್ಲಿ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಮೂಲಸೌಕರ್ಯ ಹೆಚ್ಚಳದಿಂದಾಗಿ ಗೋವಾದಲ್ಲಿ ಸೈಟು,ಮನೆ ಬೆಲೆಗಳು ಗಗನಕ್ಕೇರಿವೆ. ಕಳೆದ ವರ್ಷದಲ್ಲಿ ಗೋವಾದಲ್ಲಿ ಮನೆ ಬೆಲೆಗಳು ಶೇ. 66.3 ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷಾ ವರದಿಗಳು ತಿಳಿಸಿವೆ. ಐಷಾರಾಮಿ ವಿಲ್ಲಾಗಳ ಬೆಲೆಗಳು ಶೇ. 25 ರಿಂದ 30 ರಷ್ಟು ಹೆಚ್ಚಾಗಿದೆ.
ದೊಡ್ಡ ನಿರ್ಮಾಣ ಕಂಪನಿಗಳು ಪ್ರಸ್ತುತ ಗೋವಾದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಿವೆ. ಗೋವಾದಲ್ಲಿನ ಹೆಚ್ಚಿನ ನಿರ್ಮಾಣ ಕಂಪನಿಗಳು ಸ್ಥಳೀಯರಿಗೆ ಅಥವಾ ಗೋವಾದಲ್ಲಿ ಎರಡನೇ ಮನೆಯನ್ನು Second Home ಹುಡುಕುತ್ತಿರುವವರಿಗೆ ಮಾತ್ರ ಸರಿಹೊಂದುವ ರೀತಿಯಲ್ಲಿ ಮನೆಗಳನ್ನು ಒದಗಿಸುವತ್ತ ಗಮನಹರಿಸಿವೆ, ಆದ್ದರಿಂದ ಗೋವಾದ ಹೊರಗಿನ ದೊಡ್ಡ ನಿರ್ಮಾಣ ಕಂಪನಿಗಳು ಪ್ರಪಂಚದಾದ್ಯಂತದ ಗ್ರಾಹಕರನ್ನು ಗೋವಾಕ್ಕೆ ಆಕರ್ಷಿಸಲು ಪ್ರಯತ್ನಗಳನ್ನು ಮಾಡಿವೆ. ಇದು ಸ್ಪರ್ಧೆಯನ್ನು ಹೆಚ್ಚಿಸಿದೆ, ಇದರಿಂದಾಗಿಯೂ ಗೋವಾದಲ್ಲಿ ಮನೆಗಳ ಬೆಲೆಗಳು ಸಹ ಹೆಚ್ಚಿವೆ.