ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮಧ್ಯ ಸಾಗಾಟ ಮಾಡುತ್ತಿದ್ದ ಕಂಟೇನರ್ ಟ್ರಕ್ ನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಗೋವಾ ಗಡಿಯಲ್ಲಿ ಸೆರೆಹಿಡಿದಿದ್ದಾರೆ. ಈ ಟ್ರಕ್ ನಲ್ಲಿ 700 ಬಾಕ್ಸ ಮಧ್ಯವನ್ನು ವಷಪಡಿಸಿಕೊಳ್ಳಲಾಗಿದೆ. ಗೋವಾದ ಕೇರಿ ಚೆಕ್ ಪೋಸ್ಟ ಬಳಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಈ ಕುರಿತಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ಈ ಟ್ರಕ್ ಗೆ ಗೋವಾ ನೋಂದಣಿಯ ನಂಬರ್ ಪ್ಲೇಟ್ ಇತ್ತು. ಇದು ನಕಲಿ ಎಂದು ಸಂಶಯ ಬಂದ ಹಿನ್ನೆಲೆಯಲ್ಲಿ ಇಷ್ಟೇ ಅಲ್ಲದೆಯೇ ಇದು ಕರ್ನಾಟಕದ ಟ್ರಕ್ ಎಂದು ಸಂಶಯ ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಯಿತು. ಅಕ್ರಮವಾಗಿ ಮಧ್ಯವನ್ನು ಗೋವಾದಿಂದ ಕರ್ನಾಟಕಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎನ್ನಲಾಗಿದೆ.
ಈ ಕುರಿತಂತೆ ಟ್ರಕ್ ವಷಪಡಿಸಿಕೊಂಡು ಚಾಲಕನನ್ನು ವಷಕ್ಕೆ ಪಡೆಯಲಾಗಿದೆ.