ಸುದ್ಧಿಕನ್ನಡ ವಾರ್ತೆ
ಗೋವಾದ ಧಾರಗಳ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವೃಷಭ ಉಮೇಶ್ ಶೆಟಯೆ (17) ಸೋಮವಾರ ಬೆಳಿಗ್ಗೆ ಕಾಲೇಜಿಗೆ ತೆರಳುವ ಸಂದರ್ಭದಲ್ಲಿ ಈತನ ಮೇಲೆ ಎಸಿಡ್ ಧಾಳಿ (Acid attack) ಪ್ರಕರಣಕ್ಕೆ ಸಂಬಂಧಿಸಿದಂತೆ ನೀಲೇಶ್ ಗಜಾನನ ದೇಸಾಯಿ(ಮಹಾರಾಷ್ಟ್ರ) ಆರೋಪಿಯನ್ನು ಪೋಲಿಸರು ಕರಾಸವಾಡಾದಲ್ಲಿ ಬಂಧಿಸಿದ್ದಾರೆ.

ಎಸಿಡ್ ಧಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ವೃಷಭ ಈತನಿಗೆ ಗೋವಾ ವೈದ್ಯಕೀಯ ಮಹಾವಿದ್ಯಾಲಯ ಬಾಂಬೋಲಿಯಲ್ಲಿ ( GOa GMC) ಚಿಕಿತ್ಸೆ ನೀಡಲಾಗುತ್ತಿದೆ. ಈ ಕೃತ್ಯವು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ್ದಾಗಿರಬಹುದೆಂದು ಪೋಲಿಸರು ಶಂಖಿಸಿದ್ದು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಘಟನೆಯ ನಂತರ ಉತ್ತರ ಗೋವಾ ಪೋಲಿಸ್ ಅಧೀಕ್ಷಕ ರಾಹುಲ್ ಗುಪ್ತಾ, ಪೆಡ್ನೆ ಪೋಲಿಸ್ ನಿರೀಕ್ಷಕ ಸಚಿನ್ ಲೋಕರೆ, ಮೋಪಾ ಪೋಲಿಸ್ ನಿರೀಕ್ಷಕ ನಾರಾಯಣ ಚಿಮುಲಕರ್, ಬೆರಳಚ್ಚು ತಜ್ಞ, ಶ್ವಾನದಳ, ಸ್ಥಳನಾ ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದರು. ವಿಶೇಷವೆಂದರೆ ವೃಷಭ ಈತನ ತಂದೆ ಪೋಲಿಸ್ (Police)  ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಘಟನೆಯ ವಿವರ…
ತಂದೆ ಉಮೇಶ್ ಶೇಟಯೆ ರವರು ತನ್ನ ಮಗನಾದ ವೃಷಭ ನನ್ನು ಮಾಪ್ಸಾ ಸಾರಸ್ವತ ಕಾಲೇಜಿಗೆ (College) ತೆರಳಲು ಮನೆಯ ಬಳಿಯ ಬಸ್ ನಿಲ್ದಾಣಕ್ಕೆ ಬಿಟ್ಟುಹೋಗಿದ್ದರು. ನಂತರ ಕೆಲ ಸಮಯದಲ್ಲಿ ಕಪ್ಪು ಬಣ್ಣದ ರೈನ್ ಕೋಟ್ , ಕೈಗೆ ಹ್ಯಾಂಡ್ ಗ್ಲೋಸ್ ಧರಿಸಿದ್ದ ಯುವಕ ಬೈಕ್ ನಲ್ಲಿ ಬಂದ. ಬೈಕ್ ಮುಂಭಾಗದಲ್ಲಿ ಬಿಳಿ ಬಣ್ಣದ ಬಕೇಟ್ ನಲ್ಲಿ ಕ್ಯಾಮಿಕಲ್ ಬಾಟಲಿ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಬೈಕ್ ನಲ್ಲಿದ್ದ ವ್ಯಕ್ತಿಯು ಬಕೇಟ್ ನಲ್ಲಿದ್ದ ಕೆಮಿಕಲ್ ನ್ನು (Chemical) ವೃಷಭ ಎಂಬ ವಿದ್ಯಾರ್ಥಿಯ ಮುಖಕ್ಕೆ ಎರಚಿದ. ಆಗ ಆತನ ಮುಖ ಹಾಗೂ ದೇಹದ ಕೆಲ ಭಾಗ ಸುಟ್ಟುಹೋಯಿತು. ಆಗ ಸಹಾಯಕ್ಕಾಗಿ ಆತ ಕೂಗಾಡಲಾರಂಭಿಸಿದ ಆದರೆ ಯಾರೂ ಬರಲಿಲ್ಲ. ಕೂಗುತ್ತಲೇ ಆತ 50 ಮೀಟರ್ ವರೆಗೂ ಓಡುತ್ತಲೇ ಹೋದ. ಆಗ ಒಬ್ಬ ವ್ಯಕ್ತಿ ತನ್ನ ವಾಹನ ನಿಲ್ಲಿಸಿ ಮಾಪ್ಸಾ ಆಸ್ಪತ್ರೆಗೆ ಕರೆದುಕೊಂಡು ಹೋದ. ನಂತರ ಕೂಡಲೇ ಆತನನ್ನು ಗೋವಾ ವೈದ್ಯಕೀಯ (Goa GMC) ಆಸ್ಪತ್ರೆಗೆ ಕರೆತರಲಾಯಿತು. ವೃಷಭ ನಿಂತಿದ್ದ ಬಸ್ ನಿಲ್ದಾಣದಿಂದ 100 ಮೀಟರ್ ದೂರದಲ್ಲಿ ಆತನ ಹೊಸ ಮನೆಯಿತ್ತು.