ಸುದ್ಧಿಕನ್ನಡ ವಾರ್ತೆ
ಪಣಜಿ(ವಾಸ್ಕೊ): ಈ ಗಣಪತಿಯನ್ನು ನೋಡಿದರೆ ನಾವು ಉತ್ತರ ಪ್ರದೇಶದಲ್ಲಿರುವ ಅಯೋಧ್ಯಾ ಶ್ರೀರಾಮನ ಮೂರ್ತಿಯನ್ನು ಗಣೇಶನ ರೂಪದಲ್ಲಿ ನಾವು ನೋಡುತ್ತಿದ್ದೇವೆ, ಇಷ್ಟೊಂದು ಶೃದ್ಧಾಭಕ್ತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ತುಂಬಾ ಹೆಮ್ಮೆಯ ವಿಷಯ. ಶ್ರೀ ಗಣಪತಿಯನ್ನು ಭಕ್ತಿಯಿಂದ ಪೂಜೆ ಮಾಡಿ ಅದ್ದೂರಿ ಯಾಗಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಿ ಬರುವ ವರ್ಷ ಅನ್ನುವುದರ ಒಳಗೆ ನಿಮ್ಮ ಕನಸುಗಳು ನನಸಾಗಲಿ ಎಂದು ಗೋವಾ ಬಿಜೆಪಿ ಕರ್ನಾಟಕ ಸೆಲ್‍ನ ದಕ್ಷಿಣ ಗೋವಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ ನುಡಿದರು.
ಗೋವಾದ ವಾಸ್ಕೊ ಸಮೀಪದ ಜುವಾರಿ ನಗರದಲ್ಲಿರುವ ಲಮಾಣಿ ಕಾಲೋನಿ ಬಂಜಾರ ಸಮಾಜದ ಶ್ರೀ ಸೇವಾಲಾಲ್ ಗಣಪತಿ ಹಾಗೂ ಹಂಸನೂರು ಕ್ಯಾಂಪ್ ನಲ್ಲಿರುವ ಶ್ರೀ ಹುಚ್ಚರಪ್ಪ ಗಣಪತಿ ಮತ್ತು ಶ್ರೀ ಶಿವಾನಂದ ಗಣಪತಿ ಹಾಗೂ ಶ್ರೀ ದುರ್ಗಾದೇವಿ ಗಣಪತಿಯ ಪೂಜೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು .ಗೋವಾ ಬಿಜೆಪಿ ಕರ್ನಾಟಕ ಸೆಲ್‍ನ ದಕ್ಷಿಣ ಗೋವಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಮಾತನಾಡುತ್ತಿದ್ದರು. ಇಷ್ಟೊಂದು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಗೋವಾ ಕನ್ನಡಿಗರ ಪರವಾಗಿ ಹಾಗೂ ನಮ್ಮ ದುರ್ಗಾದೇವಿ ಗಣಪತಿ ಕಮಿಟಿಯ ಪರವಾಗಿ ಮತ್ತು ದುರ್ಗಾದೇವಿಯ ಕಮಿಟಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ರಾಜೇಶ್ ಶೆಟ್ಟಿ ನುಡಿದರು.
ಈ ಸಂದರ್ಭದಲ್ಲಿ ಜುವಾರಿ ನಗರದ ಮುಸ್ಲಿಂ ಸಮಾಜದ ಯುವ ಮುಖಂಡ ಸಮಾಜ ಸೇವಕರಾದ ವಜೀರ್ ಖಾನ್ ಮತ್ತು ಷಣ್ಮುಖ ಹಾಗೂ ಸಂಗಡಿಗರು ಶ್ರೀ ದುರ್ಗಾದೇವಿಯ ಗಣಪತಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ರಾಜೇಶ್ ಶೆಟ್ಟಿ ಹಾಗೂ ಇತರ ಗಣ್ಯರನ್ನು ಸನ್ಮಾನಿಸಲಾಯಿತು.