ಸುದ್ದಿ ಕನ್ನಡ ವಾರ್ತೆ
ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಭಕ್ತರ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಬುಧವಾರ ಬೆಳ್ಳಿಗ್ಗೆ ಭಕ್ತರ ಸಮ್ಮುಖದಲ್ಲಿ ಜರುಗಿದ್ದು ಅಮೇರಿಕಾ ಹಾಗೂ ಥೈಲ್ಯಾಂಡ್ ಕರೆನ್ಸಿ ಸೇರಿ ಒಟ್ಟು 63,10,581 ರೂ.ಗಳು ಸಂಗ್ರಹವಾಗಿದೆ.ಕಳೆದ ಮಾ.28 ರಂದು ಹುಂಡಿ ಎಣಿಕೆ ಮಾಡಲಾಗಿತ್ತು.
ಎಣಿಕೆ ಸಂದರ್ಭದಲ್ಲಿ ದೇವಾಲಯದ ಇಒ ಪ್ರಕಾಶರಾವ್ ಸೇರಿ ದೇವಾಲಯದ ವ್ಯವಸ್ಥಾಪಕರು ಸಿಬ್ಬಂದಿ ವರ್ಗ,ಬ್ಯಾಂಕ್ ಅಧಿಕಾರಿಗಳು, ಹೋಂಗಾರ್ಡ್,ಪೊಲೀಸ್ ಅಧಿಕಾರಿಗಳಿದ್ದರು. ಎಣಿಕ
ಕಾರ್ಯವನ್ನು ವಿಡಿಯೋ ರೆಕಾರ್ಡ್ ಮಾಡಲಾಯಿತು.