ಸುದ್ದಿ ಕನ್ನಡ ವಾರ್ತೆ
ಕುಮಟಾ: ವನ್ನಳ್ಳಿ ಕಡಲತೀರದಲ್ಲಿ ಸುಮಾರು 13.5 ಮೀ ಉದ್ದದ ನೀಲಿ ತಿಮಿಂಗಿಲ ಮೃತದೇಹ ಪತ್ತಯಾಗಿದ್ದು ಬಹುತೇಕ ದೇಹವು ಕೊಳೆತಿರುವ ಸ್ಥಿತಿಯಲ್ಲಿ ಕಡಲ ತೀರದಲ್ಲಿ ಕಂಡು ಬಂದಿದ್ದು, ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಾರಗಳ ಹಿಂದೆಯೇ ಸಮುದ್ರದಲ್ಲಿನ ವಾತಾವರಣ ಏರಿಳಿತದ ಕಾರಣದಿಂದಾಗಿ ಮೃತಪಟ್ಟಿದೆ ಎನ್ನಲಾಗಿದ್ದು, ಸಮುದ್ರದ ತಳಮಟ್ಟ ಹಾಗೂ ಮೇಲ್ಭಾಗದ ಸರಿಸಮನಾಗಿ ಮದ್ಯ ಭಾಗದಲ್ಲಿ ಓಡಾಡುವ ಈ ಜೀವಿಯು ತೀರ ಭಾಗಕ್ಕೆ ಬರುವುದು ತೀರಾ ವಿರಳ.ಸಮುದ್ರ ಮದ್ಯದಲ್ಲಿಯೇ ಮೃತಪಟ್ಟು ಅಲೆಗಳ ರಭಸಕ್ಕೆ ತೀರ ಬಂದು ತಲುಪಿದೆ.ದೇಹವು ಸಂಫೂರ್ಣ ಕೊಳೆತಿರುವುದರಿಂದ ಪೋಸ್ಟ್ ಮಾರ್ಟಮ್ ಮಾಡಲು ಸಹ ಸಾಧ್ಯವಾಗುವುದಿಲ್ಲ.ಹೀಗಾಗಿ ಮಣ್ಣಿನಡಿ ಹೂಳಲಾಗುವುದು ಎಂದು ಆರ್.ಎಫ್. ಓ ಪ್ರವೀಣ ನಾಯಕ ತಿಳಿಸಿದ್ದಾರೆ.