ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಮಹಿಳಾ ಪತಂಜಲಿ ಯೋಗ ಸಮೀತಿ ಯಲ್ಲಾಪುರ (ಉ.ಕ)ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಜೂನ್ 21 ರಂದು ಸಂಜೆ 5.30 ಕ್ಕೆ ಯಲ್ಲಾಪುರದ ಎನ್.ಟಿ.ಕೊ ಆವಾರದಲ್ಲಿ 11ನೇಯ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಸಮಾರಂಭದ ಉಧ್ಘಾಟನೆ ನೆರವೇರಿಸಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್ ಶಾಸಕ ಶಾಂತಾರಾಮ ಸಿದ್ಧಿ ಆಶಯದ ನುಡಿ ವ್ಯಕ್ತಪಡಿಸಲಿದ್ದಾರೆ. ಯಲ್ಲಾಪುರ ಪತಂಜಲಿ ಯೋಗ ಸಮೀತಿಯ ಪ್ರಭಾರಿ ಶೈಲಶ್ರೀ.ಉ.ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಯಲ್ಲಾಪುರ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ್ ಸಸಿಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ, ಯಲ್ಲಾಪುರ ಪಿ.ಎಸ್.ಐ ಸಿದ್ಧಪ್ಪ ಗುಡಿ ವೇದಿಕೆಯ ಮೇಲೆ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ರಾಜ್ಯಮಟ್ಟದಲ್ಲಿ ಬಂಗಾರ,ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆದ ಯೋಗ ಸಾಧಕರಾದ ಪತಂಜಲಿ ಜಿಲ್ಲಾ ಯೋಗ ವಿಸ್ತಾರಕ ಸುಬ್ರಾಯ ಭಟ್, ನೇತ್ರಾವತಿ ನಾರಾಯಣ ಭಟ್ ವಜ್ರಳ್ಳಿ, ಕುಮಾರ ಪವನ ನಾರಾಯಣ ಕೋಮಾರ ವಜ್ರಳ್ಳಿ ರವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದ ನಂತರ ಧ್ಯಾನ ಮತ್ತು ಪ್ರಾಣಾಯಾಮದ ಮಹತ್ವವನ್ನು ಪತಂಜಲಿ ಜಿಲ್ಲಾ ಯೋಗ ವಿಸ್ತಾರಕ ಸುಬ್ರಾಯ ಭಟ್ ಆನೆಜಡ್ಡಿ ರವರು ತಿಳಿಸಲಿದ್ದಾರೆ. ಈ ಕಾರ್ಯಕ್ರಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಹಿಳಾ ಪತಂಜಲಿ ಯೋಗ ಸಮೀತಿ ಯಲ್ಲಾಪುರ ಮಹಿಳಾ ಪ್ರಭಾರಿ ಶೈಲಶ್ರೀ ಉ ಭಟ್, ಕಾರ್ಯದರ್ಶಿ ಆಶಾ.ಆರ್ ಬಗನಗದ್ದೆ ಹಾಗೂ ಮಹಿಳಾ ಪತಂಜಲಿ ಯೋಗ ಸಮೀತಿ ಹಾಗೂ ಸರ್ವ ಸದಸ್ಯರು ಪ್ರಕಟೆಯಲ್ಲಿ ಕೋರಿದ್ದಾರೆ.