ಸುದ್ಧಿಕನ್ನಡ ವಾರ್ತೆ
ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ಮಾನ್ಯ ಮಂಜುನಾಥ ನಾಯ್ಕ ರವರು ಮನೆಯಿಂದಲೇ ಓದಿ ನೀಟ್ ಪರೀಕ್ಷೆಯ (Neet Exam) ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿ ಶೇ 99.34 ರಷ್ಟು ಅಂಕ ಪಡೆಯುವ ಮೂಲಕ ದೇಶದಕ್ಕೆ 14,000 ನೇಯ ರ್ಯಾಂಕ್ ಪಡೆದುಕೊಂಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ಮಂಜುನಾಥ ನಾಯ್ಕ ಹಾಗೂ ಸುಮಾ ನಾಯ್ಕ ದಂಪತಿಗಳ ಪುತ್ರಿಯಾದ ಮಾನ್ಯ ರವರು ಅಂಕೋಲಾ ಜಿಸಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 9 ನೇಯ ರ್ಯಾಂಕ್ ಪಡೆದುಕೊಂಡಿದ್ದರು. ನೀಟ್  (Neet Exam) ಬರೆಯುವ ಸಲುವಾಗಿ ಒಂದು ವರ್ಷ ಯಾವ ಕಾಲೇಜಿಗೂ ಹೋಗದೆಯೇ ಸಿದ್ಧತೆ ಮಾಡಿಕೊಂಡಿದ್ದರು. ಈ ವರ್ಷ ಮನೆಯಿಂದಲೇ ನೊಯ್ಡಾ ಮೂಲದ ತರಬೇತಿ ಸಂಸ್ಥೆಯಿಂದ ಆನ್ ಲೈನ್ ನಲ್ಲಿ ತರಬೇತಿ ಪಡೆದು ನೀಟ್ ಪರೀಕ್ಷೆ ಬರೆದಿದ್ದರು.

ಮಾನ್ಯ ರವರು ತಮ್ಮ ಮೊದಲ ಯತ್ನದಲ್ಲಿಯೇ ಉತ್ತಮ ಅಂಕ ಗಳಿಸಿ ಸಾಧನೆಗೈದಿದ್ದಾರೆ. ಮಾನ್ಯ ರವರ ತಂದೆ ಮಂಜುನಾಥ ನಾಯ್ ರವರು ಸ್ವಂತ ಉದ್ಯೋಗ ಮಾಡಿಕೊಂಡಿದ್ದಾರೆ. ಮಾನ್ಯ ರವರ ಸಾಧನೆಗೆ ಬೆಳಂಬಾರ ಗ್ರಾಮದಲ್ಲಿ ಮಾತ್ರವಲ್ಲದೆಯೇ ಜಿಲ್ಲೆಯಾದ್ಯಂತ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಯ ಮಹಾಪುರವೇ ಹರಿದುಬರುತ್ತಿದೆ.