ಸುದ್ಧಿಕನ್ನಡ ವಾರ್ತೆ
Hubili/Goa : ಗೋವಾದಲ್ಲಿ ನಡೆದಿರುವ ಬೆಂಗಳೂರು ಯುವತಿ ಕೊಲೆ ಪ್ರಕರಣ ಗೋವಾ ರಾಜ್ಯದಲ್ಲಿ ಆತಂಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಇದೀಗ ಯುವತಿಯ ಪ್ರಿಯಕರ ಸಂಜಯ ಕೋವಿನ್ ಗೋವಾ ಪೋಲಿಸ್ ಕಸ್ಟಡಿಯಲ್ಲಿದ್ದಾನೆ.
ಕಳೆದ ವಾರ ಗೋವಾಕ್ಕೆ ಬರುತ್ತಿದ್ದ ಸಂಜಯ ಕೋವಿನ್ ಮನೆ ಬಾರದೇ ಇದ್ದುದನ್ನು ಕಂಡು ಆತನ ತಂದೆ ತಾಯಿ ಪ್ರೇಯಸಿ ರೋಶನಿಗೆ ಕರೆ ಮಾಡಿ ಸಂಜಯನ ಬಗ್ಗೆ ವಿಚಾರಿಸಿದ್ದರು. ನಂತರ ರೋಶನಿ ಸಂಜಯನಿಗೆ ಕರೆ ಮಾಡಿದಳು. ಆ ಸಂದರ್ಭದಲ್ಲಿ ರೋಶನಿಯು ತಾನು ಹುಬ್ಬಳ್ಳಿಯಲ್ಲಿರುವುದಾಗಿ ಹೇಳಿದ್ದಳು.
ರೋಶನಿಗೆ ನೀನು ಅಲ್ಲಿಯೇ ನಿಲ್ಲು ನಾವಿಬ್ಬರೂ ಸೇರಿ ಗೋವಾಕ್ಕೆ ಹೋಗೋಣ ಎಂದು ಸಂಜಯ ಹೇಳಿದ್ದ. ಸಂಜಯ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬೈಕ್ ಮೇಲೆ ಬಂದು ತಲುಪಿದ. ಬೈಕ್ ಅಲ್ಲಿಯೇ ಬಿಟ್ಟು ಬಸ್ಸಿನಲ್ಲಿ ಗೋವಾಕ್ಕೆ ಹೋಗಲು ನಿರ್ಧರಿಸಿದರು. ರೋಶನಿಯು ಡಿಜಿಟಲ್ ಪೇಮೆಂಟ ಮೂಲಕ ಬಸ್ ಟಿಕೇಟ್ ಬುಕ್ ಮಾಡಿದ್ದಳು.
ಬಸ್ ನಲ್ಲಿ ತನಿಖೆ ಆರಂಭ..?
ರೋಶನಿ ಮತ್ತು ಸಂಜಯ್ (Roshani and Sanjay) ಗೋವಾಕ್ಕೆ ಬಸ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿಯೇ ತನಿಖೆ ಆರಂಭಗೊಂಡಿತ್ತು. ಸಂಜಯನು ರೋಶನಿ ಮೊಬೈಲ್ ತೆಗೆದುಕೊಂಡ, ಅದರಲ್ಲಿ ರೋಶನಿಯ ಸ್ನೇಹಿತನೊಂದಿಗಿನ ಪೋಟೊ ಕಂಡಿತು. ಅದನ್ನು ಕಂಡು ರೋಶನಿಯೊಂದಿಗೆ ಸಂಜಯ ಜಗಳಕ್ಕಿಳಿದಿದ್ದ. ಇವರಿಬ್ಬರ ಜಗಳ ಬಸ್ ನಲ್ಲಿದ್ದ ಇತರ ಪ್ರಯಾಣಿಕರಿಗೂ ತೊಂದರೆ ಉಂಟಾಗಿತ್ತು. ಇದನ್ನು ಗಮನಿಸಿದ ಕಂಡಕ್ಟರ್ ಪಿಳಯೆ ಎಂಬಲ್ಲಿ ಇಬ್ಬರಿಗೂ ಬಸ್ ನಿಂದ ಕೆಳಕ್ಕಿಳಿಯಲು ಹೇಳಿದ. ಕೊನೆಗೂ ಇಬ್ಬರನ್ನು ಪ್ರತಾಪನಗರದ ಬಳಿ ಬಸ್ ನಿಂದ ಇಳಿಸಲಾಯಿತು. ಆಗ ಸಮಯ ರವಿವಾರ ಮಧ್ಯಾನ್ಹ 4.30 ಗಂಟೆಯಾಗಿತ್ತು.
ಇಬ್ಬರನ್ನೂ ಅಲ್ಲಿ ಅರಣ್ಯದ ಪಕ್ಕದಲ್ಲಿಯೇ ಬಸ್ ನಿಂದ ಕೆಳಕ್ಕಿಳಿಸಲಾಗಿತ್ತು. ಆಗ ನಮ್ಮಿಬ್ಬರಲ್ಲಿ ಸುಮ್ಮನೆ ಜಗಳ ಬೇಡ ಎಂದು ರೋಶನಿ ಹೆದ್ದಾರಿ ಬಿಟ್ಟು ಮಣ್ಣು ರಸ್ತೆಯಲ್ಲಿ ಬದಿಗೆ ಹೋಗುತ್ತಿದ್ದಳು. ಸಂಜಯನು ಆಕೆಯನ್ನು ಅರಣ್ಯದಲ್ಲಿ ಕರೆದುಕೊಂಡು ಹೋಗಿ ಸಂಜೆ 6.30 ರ ಸುಮಾರು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ ನಂತರ ಮತ್ತೆ ಈತ ಕರ್ನಾಟಕಕ್ಕೆ ಪರಾರಿಯಾಗಿದ್ದ.
ಈ ಕುರಿತು ಪೋಲಿಸರು ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಏನಿದು ಕೊಲೆ ಪ್ರಕರಣ:
ಕಳೆದ ಸೋಮವಾರ ಬೆಳಿಗ್ಗೆ ಗೋವಾದ ಧಾರಾಬಾಂದೋಡಾ ಪೆÇದೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ, ಫೆÇೀಂಡಾ ಪೆÇಲೀಸರು ತ್ವರಿತವಾಗಿ ತನಿಖೆ ಆರಂಭಿಸಿ 24 ಗಂಟೆಗಳ ಒಳಗೆ ಶಂಕಿತನನ್ನು ಬಂಧಿಸಿದರು. ಪೆÇಲೀಸರು ಮೊದಲು ಯುವತಿಯನ್ನು ಗುರುತಿಸಿದರು. ಮೊಬೈಲ್ ಮತ್ತು ಸಿಸಿಟಿವಿ ದೃಶ್ಯಗಳಿಂದ ಯುವತಿ ತನ್ನ ಗೆಳೆಯನೊಂದಿಗೆ ಗೋವಾಕ್ಕೆ ಬಂದಿರುವುದು ಸ್ಪಷ್ಟವಾಯಿತು. ಪೆÇಲೀಸರು ಮಂಗಳವಾರ ಹುಬ್ಬಳ್ಳಿಯ ಶಂಕಿತನನ್ನು ಬಂಧಿಸಿದರು. ಆತನ ವಿಚಾರಣೆಯ ಮೂಲಕ, ಕೊಲೆಯಾದ ಯುವತಿಯನ್ನು ರೋಶಿನಿ ಮೋಸೆಸ್ ಎಂ. (22, ಕರ್ನಾಟಕದ ಉತ್ತರ ಬೆಂಗಳೂರು ನಿವಾಸಿ) ಎಂದು ಗುರುತಿಸಲಾಗಿದೆ. ಶಂಕಿತನ ಹೆಸರು ಸಂಜಯ್ ಕೆವಿನ್ ಎಂ. (22, ಕರ್ನಾಟಕದ ಉತ್ತರ ಬೆಂಗಳೂರಿನ ನಿವಾಸಿ).ಎಂದು ಗುರುತಿಸಲಾಗಿದೆ.