ಸುದ್ದಿ ಕನ್ನಡ ವಾರ್ತೆ
ಚಿಕ್ಕೋಡಿ: ನಿಪ್ಪಾಣಿ ವಿಧಾನಸಭೆ ಮತಕ್ಷೇತ್ರದ ಮಾಜಿ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರಾದ ಕಾಕಾಸಾಹೇಬ ಪಾಟೀಲ(70) ಅನಾರೋಗ್ಯದಿಂದ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಅವರಿಗೆ 70 ವರ್ಷ ವಯಸ್ಸಿನಲ್ಲಿ ನಿಧನರಾಗಿದ್ದು ನಿಪ್ಪಾಣಿ ಭಾಗದಲ್ಲಿ ಶೋಕ ಮಡುಗಟ್ಟಿದೆ.

ಹುಕ್ಕೇರಿ ತಾಲೂಕಿನ ಕನಗಲಾ ಜಿಲ್ಲಾ ಪಂಚಾಯತ ಸದಸ್ಯರಾಗಿ ರಾಜಕೀಯ ಆರಂಭ ಮಾಡಿದ ಅವರು ನಿಪ್ಪಾಣಿ ವಿಧಾನಸಭೆ ಕ್ಷೇತ್ರದಿಂದ ಮೂರು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡು ಭಾರಿ ಸೋತಿದ್ದರು. ಬೆಳಗಾವಿಯಿಂದ ಪಾರ್ಥಿವ ಶರೀರ ನಿಪ್ಪಾಣಿ ಮುನ್ಸಿಪಲ್ ಶಾಲೆಯ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡುತ್ತಿದ್ದು. ಮಧ್ಯಾಹ್ನದ ನಂತರ ಅಂತ್ಯಸಂಸ್ಕಾರ ನಡೆಯಲಿದೆ. ಅವರಿಗೆ ಓರ್ವ ಪುತ್ರ ಓರ್ವ ಪುತ್ರಿ ಇದ್ದಾರೆ.