ಸುದ್ಧಿಕನ್ನಡ ವಾರ್ತೆ

ಪಣಜಿ: ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಸೊನಾಲಿಯಮ್ ಮತ್ತು ಗೋವಾದ ದೂಧಸಾಗರ ನಿಲ್ದಾಣಗಳ ಮಧ್ಯೆ ಗೂಡ್ಸ್ ರೈಲು ಹಳಿ ತಪ್ಪಿದ ಘಟನೆ ಗುರುವಾರ ಮಧ್ಯಾಹ್ನ ಸುಮಾರು ೨ ಗಂಟೆಗೆ ಸಂಭವಿಸಿದೆ.

ಘಟನೆಯಿಂದಾಗಿ ವಿವಿಧ ಪ್ರಯಾಣಿಕ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಕೆಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಭಾಗಶಃ ರದ್ದುಗೊಳಿಸಲಾಗಿದೆ.

ಗುರುವಾರ ಸಂಚಾರ ಪ್ರಾರಂಭಿಸಿದ ವಾಸ್ಕೊ-ಹಜರತ್ ನಿಜಾಮುದ್ದಿನ್ ಎಕ್ಸ್ಪ್ರೆಸ್ ರೈಲು ಬದಲಾದ ಮಾರ್ಗ ಮಡಗಾಂವ, ರೊಹಾ, ಪಾನ್ವೆಲ್, ಪುಣೆ, ದೌಂಡ್ ಚೊರ್ಡ್ ಲೈನ್ ಮತ್ತು ಮ್ಯಾನಮ್ಯಾಡ್ ನಿಲ್ದಾಣಗಳ ಮುಖಾಂತರ ಸಂಚರಿಸಿತು.

ಸೆ.೧೦ರಂದು ಸಂಚಾರ ಪ್ರಾರಂಭಿಸಿದ್ದ ಶಾಲಿಮಾರ-ವಾಸ್ಕೊ ಎಕ್ಸ್ ಪ್ರೆಸ್ ರೈಲು ಲೋಂಡಾ ನಿಲ್ದಾಣದವರೆಗೆ ಮಾತ್ರ ಸಂಚರಿಸಿತು. ಸೆ. ೧೩ರಂದು ಸಂಚರಿಸಲಿರುವ ವಾಸ್ಕೊ-ಶಾಲಿಮಾರ ಎಕ್ಸ್ಪ್ರೆಸ್ ರೈಲು ವಾಸ್ಕೊ ಬದಲು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಸಂಚಾರ ಪ್ರಾರಂಭಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.