ಸುದ್ದಿಕನ್ನಡ ವಾರ್ತೆ
ಗುಜರಾತ್: ಅಹಮದಾಬಾದ್’ನ ಮೇಘನಿ ನಗರದ ಬಿ.ಜೆ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಪತನಗೊಂಡಿದ್ದ ಏರ್ ಇಂಡಿಯಾ ಬೋಯಿಂಗ್ 7878 ವಿಮಾನದ ಎರಡನೆಯ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ.

ವಿಮಾನದಲ್ಲಿ 2 ಬ್ಲ್ಯಾಕ್ ಬಾಕ್ಸ್‍ಗಳಿದ್ದವು. ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಶುಕ್ರವಾರ ಪತ್ತೆಯಾಗಿತ್ತು. ಕಾಕ್ ಪಿಟ್ ವಾಯ್ಸ್ ರೆಕಾರ್ಡರ್’ ಭಾನುವಾರ ಪತ್ತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಸಹಾಯಕ ಪಿ.ಕೆ. ಮಿಶ್ರಾ ಅವರು ತಿಳಿಸಿದ್ದಾರೆ.

2ನೇ ಬ್ಲ್ಯಾಕ್ ಬಾಕ್ಟ್ ಪ್ರಕರಣದ ತನಿಖೆಗೆ ನಿರ್ಣಾಯಕವಾಗಿದ್ದು, ಇದು ದುರಂತ ಸಂದರ್ಭದಲ್ಲಿ ಪ್ರತಿ ಸೆಕೆಂಡ್‍ನಲ್ಲಿಯೂ ಏನಾಯ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕಾಕ್ ಪಿಟ್ ಮತ್ತು ವಿಮಾನ ವ್ಯವಸ್ಥೆಯಲ್ಲಿ ಏನಾಯ್ತು ಎಂಬುದರ ಕುರಿತು ವಸ್ತುನಿಷ್ಠ ಮಾಹಿತಿಯನ್ನು ನೀಡುತ್ತದೆ. ಎಲ್ಲಾ ಕಾಕ್‍ಪಿಟ್ ಆಡಿಯೋ, ಪೈಲಟ್ ಸಂಭಾಷಣೆಗಳು, ರೇಡಿಯೋ ಪ್ರಸರಣಗಳು ಹಾಗೂ ಇತರೇ ಯಾಂತ್ರಿಕ ಶಬ್ಧಗಳ ಮಾಹಿತಿಯನ್ನು ಸಂಗ್ರಹಿಸುವ ಸಾಧನವಾಗಿದೆ.

ಬ್ಲ್ಯಾಕ್ ಬಾಕ್ಸ್ ವಿಮಾನದಲ್ಲಿ ಬಳಸಲಾಗುವ ಒಂದು ಎಲೆಕ್ಟ್ರಾನಿಕ್ ಸಾಧನವಾಗಿದೆ. ಇದನ್ನು ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ ಎಂದೂ ಕರೆಯಲಾಗುತ್ತದೆ.

ಬ್ಲ್ಯಾಕ್ ಬಾಕ್ಸ್‍ಗಳನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಏಕೆಂದರೆ ಅಪಘಾತದ ಸಂದರ್ಭದಲ್ಲಿ ಈ ಭಾಗವು ಹೆಚ್ಚು ಸುರಕ್ಷಿತವಾಗಿ ಇರಬೇಕು ಎಂದು ವಿಮಾನದ ಹಿಂಭಾಗದಲ್ಲಿ ಇರಿಸಲಾಗಿರುತ್ತದೆ. ಇದರ ಮುಖ್ಯ ಉದ್ದೇಶ ವಿಮಾನ ಅಪಘಾತದ ಸಂದರ್ಭದಲ್ಲಿ ಕಾರಣಗಳನ್ನು ತನಿಖೆ ಮಾಡಲು ಸಹಾಯ ಮಾಡುತ್ತದೆ. ವಿಮಾನ ದುರಂತ ಸಂಭವಿಸಿದಾಗ ಕಪ್ಪು ಬಣ್ಣ ಕಣ್ಣಿಗೆ ಬೇಗ ಕಾಣಿಸಲಿ ಅನ್ನೋದೆ ಇದರ ಉದ್ದೇಶವಾಗಿದೆ. ಹೀಗಾಗಿ ಇದನ್ನು ಬ್ಲ್ಯಾಕ್? ಬಾಕ್ಸ್? ಎಂದು ಕರೆಯಲಾಗುತ್ತದೆ.