ಸುದ್ದಿಕನ್ನಡ ವಾರ್ತೆ
Goa/Dubai: ಕಳೆದ ಹಲವು ದಿನಗಳಿಂದ ವಿಮಾನ ಕಂಪನಿಗಳ ಕಾರುಬಾರಿನಿಂದಾಗಿ ದೇಶದ ನಾಗರೀಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಾನುವಾರ ಬೆಳಿಗ್ಗೆ ದುಬೈದಿಂದ ಗೋವಾಕ್ಕೆ ಬರಬೇಕಿದ್ದ ಏರ್ ಇಂಡಿಯಾ ಐಎಕ್ಸ-840 ವಿಮಾನ ತಾಂತ್ರಿಕ ದೋಷದಿಂದ ವಿಳಂಬವಾಗಿರುವುದು ಪ್ರಯಾಣಿಕರಲ್ಲಿ ಬೇಸರವನ್ನುಂಟು ಮಾಡಿದೆ. ( Air India IX-840 flight delayed due to technical fault). ಇಷ್ಟೇ ಅಲ್ಲದೆಯೇ ಪ್ರಯಾಣಿಕರು ಭಯಭೀತರಾಗಿದ್ದಾರೆ. ಪರ್ಯಾಯ ವಿಮಾನ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ದುಬೈನಿಂದ ಭಾನುವಾರ ಬೆಳಿಗ್ಗೆ ಗೋವಾಕ್ಕೆ ಬರಬೇಕಿದ್ದ ಏರ್ ಇಂಡಿಯಾ ಐಎಕ್ಸ-840 ವಿಮಾನವು ತಾಂತ್ರಿಕ ದೋಷದಿಂದಾಗಿ ವಿಳಂಭವಾಗಿದ್ದು ಸಂಜೆ 6.30 ಕ್ಕೆ ದುಬೈಯಿಂದ ಹೊರಡಲಿದ್ದು ರಾತ್ರಿ 11.20 ಕ್ಕೆ ಗೋವಾಕ್ಕೆ ಬಂದು ತಲುಪಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಮಾನದಲ್ಲಿ ತಾಂತ್ರಿಕ ದೋಷವುಂಟಾಗಿರುವುದು ಪ್ರಯಾಣಿಕರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಗುಜರಾತ್ ನಲ್ಲಿ ವಿಮಾನ ಅವಘಡ ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ಬದಲಿ ವಿಮಾನ ವ್ಯವಸ್ಥೆ ಮಾಡಬೇಕಿತ್ತು ಎಂಬುದು ಪ್ರಯಾಣಿಕರ ಆಘ್ರಹವಾಗಿದೆ.