ಸುದ್ದಿಕನ್ನಡ ವಾರ್ತೆ
Gujrat: ಅಹಮದಾಬಾದ್ ನಲ್ಲಿ ಗುರುವಾರ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ ಘಟನೆಯಲ್ಲಿ 241 ಜನ ಪ್ರಯಾಣಿಕರು ಮೃತಪಟ್ಟಿದ್ದು, ಒಬ್ಬ ವ್ಯಕ್ತಿ ಅದೃಷ್ಠವಶಾತ್ ಪ್ರಾಣ ಉಳಿಸಿಕೊಂಡಿದ್ದಾರೆ. ಈ ವ್ಯಕ್ತಿಯ ಆರೋಗ್ಯ ವಿಚಾರಿಸಲು ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ಭೇಟಿ ನೀಡಿದರು. ದುರಂತದಲ್ಲಿ ಬದುಕುಳಿದ ರಮೇಶ್ ವಿಶ್ವಾಸ್ ಎಂಬ ವ್ಯಕ್ತಿಯನ್ನು ಭೇಟಿಯಾದ ಮೋದಿ ಆರೋಗ್ಯ ವಿಚಾರಿಸಿದರು.(Modi met a survivor named Ramesh Vishwas and inquired about his health.)
ಪ್ರಧಾನಿ ಮೋದಿ ಶುಕ್ರವಾರ ಅಹಮದಾಬಾದ್ ಗೆ ಆಗಮಿಸಿ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿಯಾಗಿ ಪ್ರಧಾನಿಗಳು ಆರೋಗ್ಯ ವಿಚಾರಿಸಿದರು.(Prime Minister Modi arrived in Ahmedabad on Friday and visited the Civil Hospital).
ಪ್ರಧಾನಿ ನರೇಂದ್ರ ಮೋದಿ ರವರು ಘಟನಾ ಸ್ಥಳಕ್ಕೆ ಕೂಡ ಭೇಟಿ ನೀಡಿ ಪ್ರತಿಕ್ರಯಿಸಿದ ಅವರು-ವಿನಾಶದ ದೃಶ್ಯವು ದುಃಖಕರವಾಗಿದೆ. ಅವಿಶ್ರಾಂತವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತು ತಂಡವನ್ನು ಭೇಟಿಯಾದೆ. ಊಹಿಸಲಾಗದ ಈ ದುರಂತದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವವರೊಂದಿಗೆ ನಾವು ಯಾವಾಗಲೂ ಇರುತ್ತೇವೆ ಎಂದು ಹೇಳಿದ್ದಾರೆ.