ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಸತಾರಾದ ಅಬ್ದುಲ್ಲಾ ಮೆಹಬೂಬ್ ಶೇಖ್ ಹಾಗೂ ಸಾಂಗ್ಲಿಯ ಡೊಂಗರೆಗಲ್ಲಿಯ ಸಂಕೇತ ಸುನೀಲ ತುಳಸನಕರ್ ಬಂಧಿತರು.
ಇವರು ಕಳೆದ 2024 ರ ಮೇ 23 ರಂದು ರಾಜಸ್ಥಾನದ ಸುರೇಶರಾವ ಹಿಮ್ಮತ್ ರಾಮಜಿರಾವ್ ಅವರ ಕಾರನ್ನು ಅರಬೈಲ್ ಘಟ್ಟದಲ್ಲಿ ತಡೆದು ನಿಲ್ಲಿಸಿ, ಬೆದರಿಕೆ ಹಾಕಿದ್ದರು. ಕಾರು, ಮೊಬೈಲ್ ಗಳನ್ನು ಅಪಹರಿಸಿ, ರಸ್ತೆಯಲ್ಲೇ ಇವರನ್ನು ಬಿಟ್ಟಿ ಹೋಗಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶಿರವಾಲಾದಲ್ಲಿ ಆರೋಪಿಗಳನ್ನು ಬಂಧಿಸಿ, ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
—————–