ಸುದ್ದಿಕನ್ನಡ ವಾರ್ತೆ
Goa : ಗೋವಾ ಸರ್ಕಾರವು ರಾಜ್ಯದ ಪರಂಪರೆ ಮತ್ತು ಸಂಸ್ಕøತಿಯನ್ನು ಉಳಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಪ್ರತಿಪಾದಿಸಿದರು.

ಪಣಜಿಯಲ್ಲಿ ಗೋವಾ ರಾಜ್ಯದ 39 ನೇ ರಾಜ್ಯೋತ್ಸವದ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದಾಗಿ ಗೋವಾದಲ್ಲಿ ಅಭಿವೃದ್ಧಿ ಕಾರ್ಯಗಳು ಎರಡು ಪಟ್ಟು ವೇಗವಾಗಿ ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಹೇಳಿದರು. ಕಳೆದ 10 ವರ್ಷಗಳಲ್ಲಿ ರಾಜ್ಯವು 50 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ್ದಕ್ಕಿಂತ ಹೆಚ್ಚು ಅಭಿವೃದ್ಧಿ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಹಕಾರದೊಂದಿಗೆ, ನಾವು ಪೆಡ್ನೆಯಿಂದ ಕಾಣಕೋಣವರೆಗೆ ಮೂಲಸೌಕರ್ಯಗಳನ್ನು ರಚಿಸಲು ಸಾಧ್ಯವಾಗಿದೆ. ಅದಕ್ಕಾಗಿಯೇ ಗೋವಾ ಎಲ್ಲಾ ರೀತಿಯಲ್ಲೂ ದೇಶದಲ್ಲಿ ಪ್ರಮುಖ ರಾಜ್ಯವಾಗಿದೆ. ಕೇಂದ್ರ ಸರ್ಕಾರದ 13 ಪ್ರಮುಖ ಉಪಕ್ರಮಗಳಲ್ಲಿ ಗೋವಾ ಶೇ. 80 ರಷ್ಟು ಪೂರ್ಣಗೊಂಡಿದೆ. ಗೋವಾವನ್ನು ಸೂರ್ಯ ಮರಳು ಮತ್ತು ಸಮುದ್ರ ಎಂದು ಕರೆಯಲಾಗುತ್ತದೆ. ಈಗ ನಾವು ಅದಕ್ಕೆ ಆಧ್ಯಾತ್ಮಿಕತೆಯ ಹೊಸ ‘ಎಸ್’ ಅನ್ನು ಸೇರಿಸಿದ್ದೇವೆ. ರಾಜ್ಯದಲ್ಲಿ ದೇವಾಲಯ ಪ್ರವಾಸೋದ್ಯಮ ಹೆಚ್ಚುತ್ತಿದೆ.

ಗೋವಾ ವಿಮೋಚನಾ ಹೋರಾಟದಲ್ಲಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗಾಗಿ ಸರ್ಕಾರ ಒಂದು ಯೋಜನೆಯನ್ನು ತಂದಿದೆ. ಅದರಂತೆ, ಸ್ವಾತಂತ್ರ್ಯ ಹೋರಾಟಗಾರರ 16 ಮಕ್ಕಳಿಗೆ ಇಂದು ಉದ್ಯೋಗ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಅವರು ತಮ್ಮ ಪೆÇೀಷಕರಂತೆ ಗೋವಾಕ್ಕೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ಸರ್ಕಾರಿ ಸೇವೆಯಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದವರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗಗಳನ್ನು ನೀಡಲಾಗುತ್ತದೆ. ಅದರಂತೆ, ಇಂದು 31 ಜನರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಮುಂದಿನ ಪೀಳಿಗೆಗೆ ಗೋವಾದ ಪರಂಪರೆ ಮತ್ತು ಇತಿಹಾಸವನ್ನು ಅರ್ಥಮಾಡಿಕೊಳ್ಳಲು, ಪುಸ್ತಕಗಳು ಮತ್ತು ಅನಿಮೇಷನ್ ಸರಣಿಯನ್ನು ಇಂದು ಅನಾವರಣಗೊಳಿಸಲಾಯಿತು. ಈ ಸರಣಿಯ ಮೊದಲ ಭಾಗವನ್ನು ಡಿಸೆಂಬರ್ 19 ರಂದು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಈ ಸಂದರ್ಭದಲ್ಲಿ ಸಚಿವರು, ಶಾಸಕರು, ಕಾರ್ಯದರ್ಶಿಗಳು ಮತ್ತು ಇಲಾಖೆಯ ನಿರ್ದೇಶಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಜಭಾಷಾ ಪ್ರಶಸ್ತಿಗಳು, ಐಕಾನಿಕ್ ಬ್ರಾಂಡ್ ಆಫ್ ಗೋವಾ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರ 16 ಮಕ್ಕಳಿಗೆ ಮತ್ತು 31 ಜನರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಪತ್ರಗಳನ್ನು ನೀಡಲಾಯಿತು. ಇದಕ್ಕೂ ಮೊದಲು, ಕೇಂದ್ರ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಅರ್ಚನಾ ಅವಸ್ಥಿ ಅವರು ಗೋವಾ ಶೇಕಡಾ 100 ರಷ್ಟು ಸಾಕ್ಷರವಾಗಿದೆ ಎಂದು ಘೋಷಿಸಿದರು.