ಸುದ್ದಿ ಕನ್ನಡ ವಾರ್ತೆ

ಧಾರವಾಡ:ವಿಶ್ವ ಬಸವ ಜಯಂತಿ ೨೦೨೫ ಪ್ರಯುಕ್ತ ಬೆಂಗಳೂರು ಬಸವ ಸಮಿತಿ,ಕಿತ್ತೂರು ಚೆನ್ನಮ್ಮಾಜಿ ಐಕ್ಯ ಕ್ಷೇತ್ರವಾದ ಬೈಲಹೊಂಗಲದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಅತ್ಯುತ್ತಮ ಸ್ಥಾನ ಗಳಿಸಿದ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೋಹಳ್ಳಿ ಗ್ರಾಮದ ಉದಯೋನ್ಮುಖ ಕವಿ ಶ್ರೀ ಬೀರಪ್ಪ ಡಿ.ಡಂಬಳಿ, ಪ್ರಖ್ಯಾತ ಕವಿ ಈಶ್ವರ ಸಣಕಲ್ಲರ ಪುತ್ರಿ ಕು.ಮಧುಮತಿ ಸಣಕಲ್ಲ, ಧಾರವಾಡದ ಖ್ಯಾತ ಕವಯಿತ್ರಿಯರಾದ ಶ್ರೀಮತಿ ಶಾಂತಾ ಕೆ.ಹೊಂಬಳ ಹಾಗೂ ಶ್ರೀಮತಿ ಲಾಲಬಿ ಹುಲಕೋಟಿ ಅವರಿಗೆ ಕನ್ನಡ ಶಕ್ತಿ ಕೇಂದ್ರವಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲ ರವರು ಅಭಿನಂದನಾ ಪತ್ರ ಮತ್ತು ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಅರ್ಪಿಸಿ ಗೌರವಿಸಿದರು.