ಸುದ್ದಿಕನ್ನಡ ವಾರ್ತೆ
Goa : ಗೋವಾದ ಪ್ರಸಿದ್ದ ಶ್ರೀ ಲಯಿರಾಯಿ ದೇವಿಯ ಜಾತ್ರೋತ್ಸವ ಶುಕ್ರವಾರ ಮೇ 2 ರಂದು ನಡೆಯಲಿದೆ. ಲಕ್ಷಾಂತರ ಭಕ್ತಾದಿಗಳ ಶೃದ್ಧಾ ಸ್ಥಾನವಾಗಿರುವ ಶ್ರೀ ಲಯಿರಾಯಿ ದೇವಿಯ ಜಾತ್ರೋತ್ಸವಕ್ಕೆ ಈಗಾಗಲೇ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಲಯಿರಾಯಿ ದೇವಿಯ ಜಾತ್ರೆ ದೇಶಾದ್ಯಂತ ಮಾತ್ರವಲ್ಲದೆಯೇ ವಿದೇಶದಲ್ಲಿಯೂ ಪ್ರಸಿದ್ಧಿ ಪಡೆದಿದೆ.
ಜಾತ್ರೋತ್ಸವದ ನಿಮಿತ್ತ ವೃತ ನಿರತ ದೋಂಡ ಭಕ್ತರು ಜಾತ್ರೆಯ ನಿಮಿತ್ತ ಐದು ದಿನ ವೃತ ನಿರತರಾಗಿ ಅಲ್ಲಲ್ಲಿ ಒಟ್ಟಾಗಿ ಪೂಜೆ ಸಲ್ಲಿಸುತ್ತಾರೆ. ಸೋಮವಾರದಿಂದ ದೋಂಡ ಭಕ್ತರು ವೃತ ಕೈಗೊಳ್ಳಲಿದ್ದಾರೆ. ಶ್ರೀ ಲಯಿರಾಯಿ ದೇವಿಯ ಜಾತ್ರೋತ್ಸವದಂದು ಸಂಜೆ ಈ ವೃತ ನಿರತರು ಕೆಂಡ ಹಾಯುವ ಪದ್ಧತಿಯಿದೆ.
ಜಾತ್ರೋತ್ಸದ ಅಂಗವಾಗಿ ಶಿರಗಾಂವ ಶ್ರೀ ಲಯಿರಾಯಿ ದೇವಿ ದೇವಸ್ಥಾನದ ಪರಿಸರದಲ್ಲಿ ಜಾತ್ರೆಗೆ ಸಿದ್ಧತೆ ನಡೆಯುತ್ತಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.