ಸುದ್ದಿಕನ್ನಡ ವಾರ್ತೆ
Goa : ದೇವಸ್ಥಾನದ ವರ್ಧಂತಿ ಉತ್ಸವಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಉಂಟಾದ ವಾದ-ವಿವಾದ ಶಮನಗೊಳ್ಳದೆಯೇ ಉತ್ಸವವನ್ನೇ ರದ್ದುಗೊಳಿಸುವ ಸ್ಥಿತಿಗೆ ಬಂದು ತಲುಪಿದೆ. ಗೋವಾದ ಆಶ್ವೆ-ಮಾಂದ್ರೆಯಲ್ಲಿನ ಭೂಮಿಕಾ ದೇವಸ್ಥಾನದಲ್ಲಿ 21 ನೇಯ ವರ್ಧಂತಿ ಉತ್ಸವವಿತ್ತು. ಈ ಉತ್ಸವದ ಪೂಜೆಯನ್ನು ಯಾರು ನೆರವೇರಿಸಬೇಕು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಭಾನುವಾರ ಎರಡು ಗುಂಪುಗಳ ನಡುವೆ ವಾದ ನಿರ್ಮಾಣವಾಯಿತು. ಇದು ಸಂಪೂರ್ಣ ಶಮನವಾಗದ ಕಾರಣ ದೇವಸ್ಥಾನದಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ಸವ ನಡೆಸದೆಯೇ ಧಾರ್ಮಿಕ ಕಾರ್ಯಕ್ರಮ ವನ್ನಷ್ಟೇ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಶ್ರೀ ಭಗವತಿ ಸಪ್ತೇಶ್ವರ ಪಂಚಾಯತನ ದೇವಸ್ಥಾನದ ಸಮೀತಿಯ ಪ್ರಮುಖರು ಭೂಮಿಕಾ ದೇವಸ್ಥಾನದ ವರ್ಧಂತಿ ಉತ್ಸವಕ್ಕೆ ಸಂಬಂಧಿಸಿದಂತೆ ಪೂಜೆ ನೆರವೇರಿಸಲು ಸುದೇಶ ಸಾವಂತ್ ರವರಿಗೆ ಪತ್ರ ನೀಡಲಾಗಿತ್ತು. ಆದರೆ ಇದಕ್ಕೆ ಮತ್ತೊಂದು ಗುಂಪು ಆಕ್ಷೇಪ ವ್ಯಕ್ತಪಡಿಸಿತು. ಈ ವಾದ-ವಿವಾದವನ್ನು ಬಗೆಹರಿಸಲು ತಹಶೀಲ್ದಾರ ಅನೀಲ್ ರಾಣೆ ಹಾಗೂ ಹಿರೀಯ ಪೋಲಿಸ್ ಅಧಿಕಾರಿಗಳು ಪ್ರಯತ್ನಿಸಿದರು. ಆದರೆ ಅದು ಶಮನವಾಗಿಲ್ಲ. ಆದ ಕಾರಣ ವರ್ಧಂತಿ ಉತ್ಸವವನ್ನು ಕೇವಲ ಪೂಜಾ ವಿಧಿಯನ್ನು ನಡೆಸುವ ಮೂಲಕ ಪೂರ್ಣಗೊಳಿಸಲಾಗುವುದು ಎಂದು ಸುರೇಶ್ ಸಾವಂತ್ ತಂಡವು ಹೇಳಿಕೆ ನೀಡಿದೆ.