ಸುದ್ದಿ ಕನ್ನಡ ವಾರ್ತೆ

Goa: ಮಹೇಶ ವಸಿಷ್ಠ ರವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡಿನವರು.
ಈ ಮೊದಲು ನೇತ್ರಾವತಿ ಧಾರವಾಹಿಯ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಮಹೇಶ ವಸಿಷ್ಠ, ಪ್ರಸ್ತುತ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರವಾಹಿ “ಸಿಂಧು ಭೈರವಿ”ಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ನಮ್ಮ ಜೊತೆ ಅವರು ಹಂಚಿಕೊಂಡಿದ್ದು, 1.1/2 ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ “ಸಿಂಧು ಭೈರವಿ”ಧಾರವಾಹಿಯಲ್ಲಿ ‘ಅಥರ್ವ” ನಾಗಿ ಕಾಣಿಸಿಕೊಳ್ಳಲಿದ್ದೇನೆ. ನಿಜಕ್ಕೂ ಈ ಪಾತ್ರ ತುಂಬಾ ಚನ್ನಾಗಿದೆ ಚನ್ನಾಗಿ ಮೂಡಿಬರುತ್ತಿದೆ.ಈ ಪಾತ್ರವು ಚನ್ನಾಗಿ ಬರಲು ಕಾರಣ ನಮ್ಮ ಡೈರೆಕ್ಟರ್ ಶಿವು ಸರ್, ಕ್ಯಾಮೆರಾಮೆನ್ ಯೋಗಿ ಸರ್ ಅವ್ರು.ಸಿಂಧೂ ಭೈರವಿ ಜೆಕೆ ಪ್ರೊಡಕ್ಷನ್ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ.
ಹಾಗೆಯೇ ಶೀಘ್ರದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಶ್ರೀ ರಾಘವೇಂದ್ರ ಮಹಾತ್ಮೆ ಧಾರವಾಹಿಯಲ್ಲಿ” ಬ್ರಹ್ಮ ” ಪಾತ್ರ ಮಾಡುತ್ತ ಇದ್ದೇನೆ.

ರಾಘವೇಂದ್ರ ಸ್ವಾಮಿಯ ಭಕ್ತ ನಾನು. ಈ ಪಾತ್ರ ನನಗೆ ಒಲಿದು ಬಂದಿದ್ದು ನನ್ನ ಪುಣ್ಯ.
ನನಗೆ ಈ ಬಣ್ಣದ ಲೋಕದಲ್ಲಿ ಹೆಸರು ಮಾಡಬೇಕು,ಒಳ್ಳೆ ನಟನಾಗಬೇಕು ಎಂಬ ಕನಸಿಗೆ ಬೆನ್ನೆಲುಬಾಗಿ ನಿಂತ ನನ್ನ ಫ್ಯಾಮಿಲಿ ಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆಯೇ.🙏
“ಸಿಂಧು ಭೈರವಿ ಉದಯ ಟಿವಿ, ಸಂಜೆ 7 ಗಂಟೆಗೆ”