ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ : ಭಾರೀ ಪ್ರಮಾಣದಲ್ಲಿ ಸಾಗವಾನಿ ಮತ್ತು ಸೀಸಂ ಮರಗಳನ್ನು ಕಡಿದು ಸಾಗಿಸಲೆತ್ನಿಸಿದ್ದ ಮೂವರು ಅರಣ್ಯಗಳ್ಳರನ್ನು ಅರಣ್ಯ ಇಲಾಖೆ ಧಾಳಿ ನಡೆಸಿ ಶನಿವಾರ ಬಂಧಿಸಿದ್ದಾರೆ.

ತಾಲೂಕಿನ ಇಡಗುಂದಿ ಅರಣ್ಯ ವಲಯದ ಅರಬೈಲ್ ಮತ್ತು ಇಡಗುಂದಿ ರಾ.ಹೆದ್ದಾರಿ ೬೩ ರ‌ಮಧ್ಯೆ ಬೆಲೆ ಬಾಳುವ ಸಾಗವಾನಿ ಮರಗಳಿದ್ದ ಕಾಡಿನಲ್ಲಿ ಭಾರೀಗಾತ್ರದ ನಾಲ್ಕು ಸಾಗವಾನಿ ಮತ್ರು‌ಒಂದು ಸೀಸಂ ಮರ ಕಡಿದು ತುಂಡು ಮಾಡಿ ಸಾಗಿಸುವ ಯತ್ನದಲ್ಲಿದ್ದಾಗ ಅಧಿಕಾರಿಗಳು ಕಟ್ಟಿಗೆ ಸಮೇತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಸ್ಥಳದಲ್ಲಿ ೨.೫೦ ಲಕ್ಷ ರೂ ಮೌಲ್ಯದ ೨.೩೬೧ ಕ್ಯೂಬಿಕ್ ಮೀಟರ್ ಕಟ್ಟಿಗೆಯನ್ನು ವಶಕ್ಕೆ ಪಡೆದಿದ್ದಾರೆ.ಈ ಭಾಗದ ನಟೋರಿಯಸ್ ಕಾಡುಗಳ್ಳನೆಂದೇ ಪ್ರಖ್ಯಾತನಾದ ಹಿಲ್ಲೂರಿನ ಮಹಾಬಲೇಶ್ವರ ಬೀರಪ್ಪ ಹರಿಕಂತ್ರ ,ಸಂದೀಪ ಸದಾನಂದ ನಾಯ್ಕ್, ಹಾಗೂ ಸುರೇಶ ತುಳುಸು ಗೌಡ ಈ ಮೂರು ಆರೋಪಿಗಳನ್ನು ಸ್ಥಳದಲ್ಲಿ ಬಂಧಿಸಿದ್ದಾರೆ.ಮಹಾಬಲೇಶ್ವರ ಬಿರಪ್ಪ ನಾಯ್ಕ್ ಈತನ ಮೇಲೆ ಅರಣ್ಯಗಳ್ಳತನದ ಹಲವಾರು ಪ್ರಕರಣಗಳು ಬೇರೆ ಬೇರೆ ವಲಯದಲ್ಲಿ ದಾಖಲಾಗಿದೆ.ಆರೋಪಿಗಳನ್ನು ಬಂಧಿಸುವಲ್ಲಿ ಡಿಎಪ್ಓ ಹರ್ಷಭಾನು ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯಕ,ಡಿ.ಆರ್.ಎಫ್ ಓ ಸಂತೋಷ ಫವಾರ,ಚಂದ್ರಹಾಸ ಪಟಗಾರ,ಸೋಮಶೇಖರ ನಾಯ್ಕ,ಕಾಸದಿನಾಥ ಯಕ್ಕುಂಚಿ,ಹಾಗೂ ರಾಮನಗುಳಿ ವಲಯಾರಾಣ್ಯಾದ್ಇಕಾರಿ ದೀಪಕ್ ನಾಯ್ಕ, ಮತ್ತು ಅಂಕೋಲಾ ವಲಯಾರಣ್ಯಾಧಿಕಾರಿ ಪ್ರಮೋದ ಹಾಗೂ ಮೋಹನ್ ನಾಯ್ಕ ಮತ್ತಿತರ ಸಿಬ್ಬಂದಿಗಳು ಗಸ್ತುಪಾಲಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಪ್ರದೇಶದ ಸುತ್ತ‌ಮುತ್ತ ಬೀರಗದ್ದೆ ಶೀರ್ಲ್,ತಾಳಿಕುಂಬ್ರಿ,ಅರಬೈಲ್ ಸೇರಿದಂತೆ ಸುತ್ತಮುತ್ತ ಬೆಲೆಬಾಳುವ ಸಾಗವಾನಿ‌ಮರಗಳಿದ್ದು ಆಗಾಗ ಅಕ್ರಮ ಮರಗಳ ಸಾಗಾಟ ಕಡಿತದ ಬಗ್ಗೆ ಕೇಳಿಬಂತ್ತು.ಈಗ ನಟೋರಿಯಸ್ ಅರಣ್ಯಗಳ್ಳರನ್ನು ಬಂಧಿಸುವ ಮೂಲಕ ಅರಣ್ಯ ಇಲಾಖೆ ದೊಡ್ಡ ಸಾಹಸ ಮಾಡೊ ಪ್ರಶಂಸೆಗೆ ಪಾತ್ರವಾಗಿದೆ.

 

ಸಾಗವಾನಿ ಮರದ ಕಟ್ಟಿಗೆ ಸಹಿತ ಅರಣ್ಯಗಳ್ಳರ ಬಂಧಿಸಿದ ಇಲಾಖೆ