ಸತ್ಯ ಕನ್ನಡ ವಾರ್ತೆ
ರಬಕವಿ-ಬನಹಟ್ಟಿ : ಬೇಸಿಗೆ ಸಮೀಪಿಸುತ್ತಿದೆ. ಬಿಸಿಲಿನ ತಾಪಮಾನವೂ ಹೆಚ್ಚುತ್ತಿದೆ. ಈ ಭಾಗದ ಜನತೆಗೆ ಕೃಷ್ಣಾ ನದಿ ಹಾಗೂ ಘಟಪ್ರಭಾ ನದಿಗಳು ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿವೆ. ತಾಲೂಕಿನ ಬಹು ಭಾಗದ ಜನತೆ ಕೃಷ್ಣಾ ನದಿಯ ಮೂಲವನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಪ್ರಮುಖ ಪಟ್ಟಣಗಳಾದ ರಬಕವಿ-ಬನಹಟ್ಟಿ, ತೇರದಾಳಕ್ಕೆ ಕುಡಿಯುವ ನೀರಿನ ಮೂಲ ಕೃಷ್ಣಾ ನದಿಯಾಗಿದ್ದು ಹಿಪ್ಪರಗಿ ಜಲಾಶಯದ ಹಿನ್ನೀರಿನಿಂದಾಗಿ ಸದ್ಯ ಕೃಷ್ಣಾ ನದಿಯಲ್ಲಿ ೨.೪೯ ಟಿಎಂಸಿ ನೀರು ಇದ್ದು, ಈ ಸಲದ ಬೇಸಿಗೆಗೆ ಅಷ್ಟೊಂದು ಪ್ರಮಾಣದಲ್ಲಿ ಆತಂಕ ಇಲ್ಲದಿದ್ದರೂ. ಹಿಪ್ಪರಗಿ ಜಲಾಶಯದ ಮುಂದಿನ ಭಾಗದಲ್ಲಿ ನೀರು ಖಾಲಿಯಾಗುತ್ತಾ ನಡೆದಿದ್ದು, ಹಿಪ್ಪರಗಿ ಜಲಾಶಯದಿಂದ ನೀರನ್ನು ಮುಂದಿನ ಭಾಗಕ್ಕೆ ಬಿಟ್ಟಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಬಹುದು. ಆ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಹಾಗೂ ಮುಖಂಡರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯವಾಗಿದೆ.
ಪ್ರಮುಖ ಮೂಲವಾಗಿರುವ ಕೃಷ್ಣಾ ನದಿಯ ನೀರು ಇನ್ನೂ ಸುಮಾರು ಮೇ ತಿಂಗಳ ಮೊದಲು ಅಥವಾ ಎರಡನೇಯವಾರದವರೆಗೆ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಆದರೆ ಈಗಿನ ಪ್ರಖರವಾದ ಬೀಸಿಲು, ನದಿ ಸಮೀಪದ ರೈತರು ತಮ್ಮ ಜಮೀನುಗಳಿಗೆ ನೀರು ಹಾಯಿಸಿಕೊಳ್ಳುವುದು ಹಾಗೂ ಹಿಪ್ಪರಗಿ ಜಲಾಶಯದಿಂದ ಮುಂದಿನ ಭಾಗಕ್ಕೆ ನೀರು ಹರಿಸಿದ್ದಲ್ಲಿ ಇನ್ನೂ ಬೇಗನೆ ನೀರಿನ ಸಮಸ್ಯೆ ಎದುರಿಸಬಹುದು. ಆ ನಿಟ್ಟಿನಲ್ಲಿ ಪೂರ್ವಬಾವಿಯಾಗಿ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅವಶ್ಯ.
ರಬಕವಿ-ಬನಹಟ್ಟಿ ತಾಲೂಕಿನ ಅವಳಿ ನಗರಗಳಲ್ಲಿ ಉಂಟಾಗುತಿದ್ದ ನೀರಿನ ಭವನೆ ಸದಸ್ಯಕ್ಕೆ ಕಂಡು ಬರುತ್ತಿಲ್ಲ. ಆದರೂ ಮುಂದಿನ ದಿನಮಾನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಗರದ ಎಲ್ಲ ವಾರ್ಡಗಳಲ್ಲಿ ನಗರಸಭೆ ವತಿಯಿಂದ ಕೃಷ್ಣಾ ನದಿಯಿಂದ ಜಾಕವೆಲ್ ಮೂಲಕ ನೀರಿನ ವ್ಯವಸ್ಥೆ ಮಾಡುತ್ತಿದ್ದು, ಅಲ್ಲದೇ ಪ್ರತಿಯೊಂದು ವಾರ್ಡಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿದ್ದು ಅವುಗಳ ಮೂಲಕ ನೀರನ್ನು ಪೂರೈಸುವ ಸಲುವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಸದ್ಯಕ್ಕೆ ನೀರಿನ ತೊಂದರೆ ಆಗುವುದಿಲ್ಲ ಎಂಬ ಅಭಿಪ್ರಾಯವಿದ್ದರೂ ಬಿಸಿಲಿನ ಪ್ರಖರತೆಯನ್ನು ನೋಡಿದರೆ ನೀರಿನ ಭವನೆ ತಪ್ಪಲಾರದು.
ಮೇ, ಜೂನ್‌ತಿಂಗಳವರೆಗೆ ಜನರ ಬೆವರಿಳಿಸಲಿರುವ ಬಿಸಿಲಿನ ಬೇಗೆಯನ್ನು ಅತ್ಯಂತ ವ್ಯವಸ್ಥಿತವಾಗಿ ಎದುರಿಸುವ ನಿಟ್ಟಿನಲ್ಲಿ ಸಂಬAಧಿಸಿದ ಇಲಾಖೆಗಳು ಹಾಗೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ.
ಅಲ್ಲದೇ ಈ ಭಾಗದಲ್ಲಿ ಅಂತರಜಲ ಮಟ್ಟ ಹೆಚ್ಚಾಗಿದ್ದು, ಎಲ್ಲಿ ಅಗೆದರೂ ನೀರು ದೊರೆಯುತ್ತಿದ್ದು, ಇದು ಸಾರ್ವಜನಿಕರಿಗೆ ವರದಾನವಾಗಿದೆ. ಅಲ್ಲದೇ ಅಕಾಲಿಕ ಮಳೆ ಹಾಗೂ ನೆರೆಯ ಮಹಾರಾಷ್ಟçದ ಕೋಯ್ನಾದಿಂದ ನೀರು ಬಿಟ್ಟಲ್ಲಿ ಸಮಸ್ಯೆ ಆಗುವುದಿಲ್ಲ. ಆದರೂ ತಾಲ್ಲೂಕು ಆಡಳಿತ ಹಾಗೂ ರಾಜಕೀಯ ಮುಖಂಡರು ಅಗತ್ಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡು ಮುಂದೆ ಉದ್ಬವಿಸಬಹುದಾದ ಬವಣೆಗೆ ಸೂಕ್ತ ಪರಿಹಾರ ಕಂಡು ಕೊಳ್ಳುವುದು ಅನಿವಾರ್ಯ.
ಇನ್ನೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಕೊಳವೆ ಬಾವಿ, ಕೆರೆ ಇತರೆ ಸಂಪನ್ಮೂಲಗಳನ್ನು ಬಳಸಿಕೊಂಡು ನೀರಿನ ವ್ಯವಸ್ಥೆ ಮಾಡಲು ತಾಲೂಕು ಆಡಳಿತ ಸಿದ್ದತೆ ಮಾಡಿಕೊಂಡಿದೆ.
ಸಧ್ಯ ಮುಂದಿನ ದಿನಮಾನಗಳಲ್ಲಿ ಸಂಭವಿಸುವ ಬರ ಪರಸ್ಥಿತಿಯಲ್ಲಿ ಕುಡಿಯುವ ನೀರು, ಬೆಳೆ, ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಈ ಗಂಭೀರ ಸಮಸ್ಯೆಯನ್ನು ಯಾವ ರೀತಿ ಎದುರಿಸುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರಬಕವಿ-ಬನಹಟ್ಟಿ ತಾಲೂಕಿಗೆ ಸಂಬAದಿಸಿದAತೆ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕೆ ಇಲ್ಲ. ಈಗಾಗಲೇ ಘಟಪ್ರಭೆಯಿಂದ ನೀರು ಬಿಟ್ಟಿದ್ದಾರೆ. ಕೃಷ್ಣಾ ನದಿಯಲ್ಲಿ ಸುಮಾರು ೨ ಟಿಎಂಸಿಗಿAತ ಅಧಿಕ ನೀರು ಇದ್ದು, ಬೇಸಿಗೆ ನಿಭಾಯಿಸಬಹುದು. ಸಾರ್ವಜನಿಕರು ಬೇಸಿಗೆ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಸಬೇಕು. ಅದಕ್ಕೆ ಸಾರ್ವಜನಿಕರು ಸಹಕಾರ ಕೂಡಾ ಅಗತ್ಯವಾಗಿದೆ. ಒಂದು ವೇಳೆ ನೀರಿನ ಸಮಸ್ಯೆ ಉದ್ಭವಿಸಿದ್ದಲ್ಲಿ ಅದನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.
-ಶ್ವೇತಾ ಬೀಡಿಕರ, ಉಪವಿಭಾಗಾಧಿಕಾರಿಗಳು, ಜಮಖಂಡಿ
ಸದ್ಯ ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ಸದ್ಯಕ್ಕೆ ನೀರಿನ ಯಾವುದೇ ಸಮಸ್ಯೆ ಇಲ್ಲ. ಹಾಗೂ ಮುಂದೆ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಅದನ್ನು ನಿಭಾಯಿಸಲು ತಾಲ್ಲೂಕು ಆಡಳಿತ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತದೆ
-ಗಿರೀಶ ಸ್ವಾದಿ, ತಹಶೀಲ್ದಾರರು, ರಬಕವಿ-ಬನಹಟ್ಟಿ
ಕೃಷ್ಣಾ ನದಿ ನೀರು ಬತ್ತಿದ್ದಲ್ಲಿ ನಾವು ಬೋರವೆಲ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಲು ಸಜ್ಜಾಗಿದ್ದೇವೆ. ಒಂದು ವೇಳೆ ಬರ ಪರಸ್ಥಿತಿ ಹೆಚ್ಚಾದಲ್ಲಿ ಈ ಕುರಿತು ಅಗತ್ಯ ಕ್ರಮಗಳನ್ನು ತೆಗೆದುಕೊಂಡು, ತಾಲೂಕಿನಲ್ಲಿ ನೀರಿನ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ.
-ಸಿದ್ದಪ್ಪ ಪಟ್ಟಿಹಾಳ, ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯತಿ, ರಬಕವಿ-ಬನಹಟ್ಟಿ
ಈ ಬಾರಿ ರಬಕವಿ-ಬನಹಟ್ಟಿ ನಗರಸಭೆಯಾದ್ಯಂತ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಈಗಾಗಲೇ ೩೦೦ಕ್ಕೂ ಹೆಚ್ಚು ಕೊಳವೆ ಬಾವಿ, ೧೩ ತೆರೆದ ಬಾವಿಗಳಿದ್ದು, ಅವುಗಳನ್ನು ಬಳಸಿಕೊಳ್ಳಲಾಗುವುದು. ಒಂದೊಮ್ಮೆ ಬರ ಪರಸ್ಥಿತಿ ನಿರ್ಮಾಣವಾದಲ್ಲಿ ಅದನ್ನು ಎದುರಿಸಲು ಸಕಲ ರೀತಿಯಿಂದ ರಬಕವಿ-ಬನಹಟ್ಟಿ ನಗರಸಭೆ ಸಜ್ಜಾಗಿದೆ.
-ಜಗದೀಶ ಈಟಿ, ಪೌರಾಯುಕ್ತರು, ರಬಕವಿ-ಬನಹಟ್ಟಿ ನಗರಸಭೆ