ಸುದ್ದಿಕನ್ನಡ ವಾರ್ತೆ
Goa: ಗೋವಾ ರಾಜಧಾಜಿ ಪಣಜಿಯ ಮಾಂಡವಿ ಹೊಸ ಸೇತುವೆಯನ್ನು ಮಾರ್ಚ್ 27 ರಿಂದ ಏಪ್ರಿಲ್ 5 ರವರೆಗೆ ನಿರ್ವಹಣಾ ಕಾರ್ಯಕ್ಕಾಗಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಬಂದ್ ಮಾಡಲಾಗುತ್ತಿದೆ. ಈ ಹತ್ತು ದಿನಗಳಲ್ಲಿ, ಹಳೆಯ ಸೇತುವೆಯಿಂದ ಎಲ್ಲಾ ವಾಹನ ಸಂಚಾರವನ್ನು ತಿರುಗಿಸಲಾಗುತ್ತದೆ. 12 ಟನ್‍ಗಳಿಗಿಂತ ಹೆಚ್ಚು ತೂಕದ ವಾಹನಗಳನ್ನು ಅಟಲ್ ಸೇತುವೆ ಮೂಲಕ ತಿರುಗಿಸಲಾಗುತ್ತದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ.

ಕಳೆದ ತಿಂಗಳು, ಇಲಾಖೆಯು ಮಾಂಡವಿ ಹಳೇಯ ಸೇತುವೆಯ ದುರಸ್ತಿ ಕಾರ್ಯವನ್ನು ನಡೆಸಿತ್ತು, ಇದಕ್ಕಾಗಿ ಸೇತುವೆಯನ್ನು 15 ದಿನಗಳ ಕಾಲ ಮುಚ್ಚಲಾಗಿತ್ತು. ಇದರಿಂದಾಗಿ ಪಣಜಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ತೊಂದರೆ ಅನುಭವಿಸಿದರು. ಪಣಜಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಮತ್ತು ಪರ್ವರಿಯಲ್ಲಿ ಹೆದ್ದಾರಿ ಕಾಮಗಾರಿಗಳು ಸಂಚಾರ ದಟ್ಟಣೆಯನ್ನು ಹೆಚ್ಚಿಸಿದ್ದವು. ಇಲ್ಲಿ ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ವಾಹನಗಳ ಸಾಲುಗಳು ಸರ್ವೆಸಾಮಾನ್ಯವಾಗಿತ್ತು.

ಅಂದು ಕೆಲವು ಶಾಲಾ ಪರೀಕ್ಷೆಗಳಿಂದಾಗಿ ಪೆÇೀಷಕರು ಮತ್ತು ವಿದ್ಯಾರ್ಥಿಗಳು ಕಷ್ಟಗಳನ್ನು ಸಹಿಸಬೇಕಾಯಿತು. ಇದಾದ ನಂತರ, ಮಾರ್ಚ್ 2 ರಿಂದ 10 ರವರೆಗೆ ಹೊಸ ಮಾಂಡವಿ ಸೇತುವೆಯನ್ನು ಮುಚ್ಚಲು ನಿರ್ಧರಿಸಲಾಯಿತು. ಆದರೆ, ವಿರೋಧ ವ್ಯಕ್ತವಾದ ಕಾರಣ ದುರಸ್ತಿ ಕಾರ್ಯವನ್ನು ಮುಂದೂಡಲಾಯಿತು. ಈಗ ಮಾರ್ಚ್ 27 ರಿಂದ ಏಪ್ರಿಲ್ 5 ರವರೆಗೆ ಹೊಸ ಮಾಂಡವಿ ಸೇತುವೆಯನ್ನು ಮುಚ್ಚಲು ನಿರ್ಧರಿಸಲಾಗಿದೆ.