ಸುದ್ದಿ ಕನ್ನಡ ವಾರ್ತೆ 

ಪಣಜಿ: ಗೋವಾ ರಾಜ್ಯದ್ಯಂತ ಮಂಗಳವಾರ ಸಂಜೆ ಪ್ರಸಕ್ತ ವರ್ಷದ ಮೊಟ್ಟಮೊದಲ ಮಳೆ ದಾಖಲಾಗಿದೆ.

ಕಳೆದ ಹಲವು ದಿನಗಳಿಂದ ತೀವ್ರ ತಾಪಮಾನದಿಂದ ಕಂಗಟ್ಟಿದ್ದ ಜನತೆಗೆ ವರ್ಷದ ಮೊದಲ ಮಳೆ ತಂಪೆರೆದಿದೆ.

ಗೋವಾ ರಾಜಧಾನಿ ಪಣಜಿ ಸೇರಿದಂತೆ ರಾಜ್ಯಾದ್ಯಂತ ಇಂದು ಗುಡುಗು ಸಹಿತ  ಉತ್ತಮ ಮಳೆಯಾಗಿದೆ.

ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಮೋಡಕವಿದ ವತಾವರಣ ಕಂಡುಬಂದಿತ್ತು. ಗೋವಾ ರಾಜ್ಯದಲ್ಲಿ ತಾಪಮಾನ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿತ್ತು. ತೀವ್ರ ತಾಪಮಾನದಿಂದ ಕಂಗಟ್ಟಿದ್ದ ಜನತೆಗೆ ಮಂಗಳವಾರ ಸಂಜೆ ಸುರಿದ ಮಳೆ ತಂಪೆರದಿದೆ.