ಸುದ್ದಿಕನ್ನಡ ವಾರ್ತೆ
Goa: ಗೋವಾದ ಕವಳೆ ಮಠದ ಶ್ರೀಮದ್ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಜಿಯವರ ವಿರುದ್ಧ ಗೋವಾದ ಪೆÇೀಂಡಾ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್.ಐ.ಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಗೋವಾದ ಕವಳೆ ಮಠದ ಶ್ರೀಮತ್ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಗಳು ತಮ್ಮ ವಿರುದ್ಧ ಪೆÇೀಂಡಾ ಪೆÇಲೀಸರು ದಾಖಲಿಸಿರುವ ಎಫ್.ಐ.ಆರ್ ರದ್ದುಗೊಳಿಸುವಂತೆ ಕೋರಿ ಗೋವಾದ ಬಾಂಬೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಕವಳೆ-ಪೆÇೀಂಡಾದಲ್ಲಿ ಸ್ವಾಮಿಜಿ, ಅವಧೂತ್ ಶಿವರಾಮ್ ಕಾಕೋಡ್ಕರ್ ಮತ್ತು ವಕೀಲ ಮನೋಹರ್ ಅಡ್ಪೈಕರ್ ಅವರ ವಿರುದ್ಧ ನಕಲಿ ದಾಖಲೆ ಸೃಷ್ಟಿಸುವುದು ಮತ್ತು ವಂಚನೆಯ ಆಸ್ತಿ ಮಾರಾಟದ ಆರೋಪದ ಮೇಲೆ ಈ ಹಿಂದೆ ಪ್ರಕರಣ ದಾಖಲಿಸಲಾಗಿತ್ತು.
ಏನಿದು ಆರೋಪ….?
ಪೆÇಂಡಾ ತಾಲೂಕಿನಲ್ಲಿರುವ ಶ್ರೀಮಠದ ಜಮೀನು ಮಾರಾಟ ಮಾಡುವಾಗ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಸ್ವರ್ಗವಾಸಿಗಳಾಗಿರುವ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ಸಹಿ ಮಾಡಿರುವ ಗಂಭೀರ ಆರೋಪ ಮಾಡಿ ಪೆÇಂಡಾ ಪೆÇೀಲಿಸ್ ಠಾಣೆಯಲ್ಲಿ ದೂರು (ಎಫ್.ಐ.ಆರ್) ದಾಖಲಾಗಿತ್ತು.
ಗೋವಾದ ಕವಳೆ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಹಾಗೂ ಇನ್ನಿಬ್ಬರ ವಿರುದ್ಧ ಪೆÇೀಂಡಾ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಯು ಶ್ರೀಗಳ ಶಿಷ್ಯವೃಂದ ಹಾಗೂ ಅನುಯಾಯಿಗಳಲ್ಲಿ ಆತಂಕ ಮನೆ ಮಾಡಿತ್ತು. ಶ್ರೀ ಮಠದ ಶಿಷ್ಯರು ಕರ್ನಾಟಕ ಸೇರಿದಂತೆ ಮುಂಬಯಿಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.