ಸುದ್ದಿ ಕನ್ನಡ ವಾರ್ತೆ
ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಕ್ಷೇತ್ರದ ವಾಹನಗಳ ಪಾರ್ಕಿಂಗ್ ಮಾಡುವ ಜಾಗದ ಟೆಂಡರ್ ಹರಾಜು ಪ್ರಕ್ರಿಯೆ ಸೋಮವಾರ ಅಂಜನಾದ್ರಿ ಪಾರ್ಕಿಂಗ್ ಜಾಗದಲ್ಲಿ ದೇವಾಲಯದ ಕಾರ್ಯನಿರ್ವಾಕ ಅಧಿಕಾರಿ ಪ್ರಕಾಶರಾವ್ ಅವರ ನೇತೃತ್ವದಲ್ಲಿ ಜರುಗಿತು.
೨೦೨೫-೨೬ನೇ ಸಾಲಿಗಾಗಿ ಜರುಗಿದ ಪಾರ್ಕಿಂಗ್ ಜಾಗ ಮತ್ತು ಶೌಚಾಲಯ ಹರಾಜಿನಲ್ಲಿ ಗಂಗಾವತಿ ವಡ್ಡರಹಟ್ಟಿ ಗ್ರಾಮದ ವೆಂಕಟೇಶ್ ಎನ್ನುವವರು ಗರಿಷ್ಠ ೩೦.೩೦ ಲಕ್ಷ ರೂ.ಗಳನ್ನು ಕೂಗಿದ್ದರಿಂದ ಈ ಭಾರಿಯ ಪಾರ್ಕಿಂಗ್ ಟೆಂಡರ್ ಪಡೆದರು.ಕಳೆದ ವರ್ಷ ಕಂಪಸಾಗರದ ಗೋಪಿ ೨೫.೯೦ ಲಕ್ಷ ರೂ.ಗಳಿಗೆ ಟೆಂಡರ್ ಪಡೆದಿದದ್ದು ಕಳೆದ ಮೂರು ವರ್ಷಗಳಿಂದಲೂ ಗೋಪಿಯವರು ಪಾರ್ಕಿಂಗ್ ಟೆಂಡರ್ ಪಡೆದುಕೊಂಡಿದ್ದರು.ಈ ಭಾರಿ ಅತೀ ಹೆಚ್ಚು ೩೦.೩೦ ಲಕ್ಷ ರೂ.ಗಳಿಗೆ ಟೆಂಡರ್ ಹರಾಜನ್ನು ವಡ್ಡರಹಟ್ಟಿ ಗ್ರಾಮದ ವೆಂಕಟೇಶ ಕೂಗಿದ್ದರಿಂದ ಪ್ರಸಕ್ತ ಸಾಲಿನ ಟೆಂಡರ್ ಪಡೆಯುವಲ್ಲಿ ಯಶಸ್ವಿಯಾದರು.

ಇನ್ನೂ ಕೊಬ್ಬರಿ ಹಾಗೂ ಚಿಪ್ಪಿನ ಹರಾಜು ವಣಗೇರಿಯ ಹುಲುಗಪ್ಪ ಇವರು ವಾರ್ಷಿಕ 7.20 ಲಕ್ಷ ರೂ.ಗಳಿಗೆ ಪಡೆದು ಕೊಂಡಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಂದ ವ್ಯಕ್ತಿಗಳು ಪಾಲ್ಗೊಂಡಿದ್ದರು.ದೇವಾಲಯಕಮೀಟಿಯ ಇಒ ಪ್ರಕಾಶರಾವ್ ಸಿಬ್ಬಂದಿಗಳಾದ ವಿರೇಶ,ಎಂ.ವೆಂಕಟೇಶ ಸೇರಿ ಅನೇಕರಿದ್ದರು.