ಸುದ್ದಿ ಕನ್ನಡ ವಾರ್ತೆ

ರಾಷ್ಟೀಯ ಪ್ಯಾರಾ ವಾಲಿಬಾಲ್ ಚಾಂಪಿಯನ್ ಟ್ರೋಫಿ : ಶಿರಸಿಯ ಪ್ರತಾಪ ಹೆಗಡೆ ಒಳಗೊಂಡ ಕರ್ನಾಟಕ ತಂಡ ರನ್ನರ್ ಆಪ್

ಶಿರಸಿ: ಇರೋಡನಲ್ಲಿ ಮುಕ್ತಾಯಗೊಂಡ ಹಿರಿಯರ ರಾಷ್ಟ್ರೀಯ ಪ್ಯಾರಾ ವಾಲಿಬಾಲ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕ ದ್ವಿತೀಯ ಸ್ಥಾನಗಳಿಸಿದೆ. ಈ ತಂಡದಲ್ಲಿ ಶಿರಸಿ ಉಪನ್ಯಾಸಕ, ಕ್ರೀಡಾಪಟು ಪ್ರತಾಪ ಹೆಗಡೆ ಕೂಡ ಪಾಲ್ಗೊಂಡು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪ್ರತಾಪ ಹೆಗಡೆ ಅವರು ಪತ್ರಕರ್ತ ಪರಮಾನಂದ ಹೆಗಡೆ ಪುತ್ರ.