ಸುದ್ದಿ ಕನ್ನಡ ವಾರ್ತೆ
ಶಿರಸಿ: ಸಾಹಿತ್ಯ ಪ್ರೀತಿಯ ಪೋಲಿಸ್ ಅಧಿಕಾರಿ ಶಿರಸಿ ನಗರ ಠಾಣೆ ಪಿಎಸ್ಆಯ್ ನಾಗಪ್ಪ ಬಿ ಇವರಿಗೆ 2022 ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಅಯ್ಕೆಯಾಗಿದ್ದಾರೆ.
ಶಿರಸಿ ಮಾರ್ಕೆಟ್ ಠಾಣೆಯ ಪಿಎಸ್ಆಯ್ ಆಗಿ ತಮ್ಮ ನಿಖರವಾದ ಸೇವೆಯ ಮೂಲಕ ಜನಸ್ನೇಹಿ ಪಿಎಸ್ಆಯ್ ಎಂದೇ ಗುರುತಿಸಿಕೊಂಡಿದ್ದ ಅವರು ಕಾರವಾರಕ್ಕೆ ವರ್ಗಾವಣೆಗೊಂಡಿದ್ದರು. ನಂತರ ಅವರು ಪುನಃ ಶಿರಸಿ ನಗರ ಠಾಣೆಗೆ ಬಂದು ಪಿಎಸ್ಆಯ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ನಾಗಪ್ಪ ಗುಲ್ಬರ್ಗದಲ್ಲಿ ಪಿಎಸ್ಆಯ್ ಆಗಿ ನಿಯೋಜನೆಗೊಂಡ ಬಳಿಕ ಅವರು ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರ ಠಾಣೆಯ ಪಿಎಸ್ಆಯ್ ಆಗಿಯೂ ಸೇವೆ ಸಲ್ಲಿಸಿದ್ದರು.