ಸುದ್ದಿ ಕನ್ನಡ ವಾರ್ತೆ

ಶಿರಸಿ; ಯಾವುದೇ ದಾಖಲೆಗಳನ್ನು ಹೊಂದಿಲ್ಲದೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ನಗರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಆರೋಪಿತರಾದ ಹಾವೇರಿಯ ತೋಟದ ಯಲ್ಲಾಪುರದ ಬೀರಪ್ಪ ನಿಂಗಪ್ಪ ಹಾವೇರಿ ಹಾಗೂ ಹಾವೇರಿ ದೇವಗಿರಿಯ ಕೊಟ್ರೇಶ ಶೇಖಪ್ಪ ಹೊಳಲು ಇಬ್ಬರು ಸೇರಿಕೊಂಡು ಕೆಎ 27,ಸಿ-6923 ಮಹಿಂದ್ರಾ ಬುಲೆರೊ ಪಿಕಪ್ ವಾಹನದಲ್ಲಿ ಒಂದು ಎಮ್ಮೆ, ಒಂದು ಕೋಣದ ಕರು ಮತ್ತು ಒಂದು ಹೋರಿ ಕರು ಒಟ್ಟು ಮೂರು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಹಾವೇರಿ ಕಡೆಗೆ ತೆರಳುತ್ತಿರುವಾಗ ಶಿರಸಿಯ ನಿಲೇಕೆಣಿ ಹತ್ತಿರ ಶಿರಸಿ ನಗರ ಠಾಣೆ ಪಿಎಸ್ಐ ನಾಗಪ್ಪ ಬಿ ಅವರ ನೇತೃತ್ವದ ಎಎಸ್ಐ ನಾರಾಯಣ ರಾಥೋಡ,
ಸಿಬ್ಬಂದಿಗಳಾದ ಹನುಮಂತ ಕಬಾಡಿ,ಅರುಣ ಲಮಾಣಿ,
ಸದ್ದಾಂ ಹುಸೇನ್ ರವರನ್ನೊಳಗೊಂಡ ತಂಡದವರು ಕಾರ್ಯಾಚರಣೆ ನಡೆಸಿ ಆರೋಪಿತರನ್ನು
ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಅಂದಾಜು 4 ಲಕ್ಷ ರೂ ಮೌಲ್ಯದ ಬುಲೆರೊ ಮಹಿಂದ್ರಾ ವಾಹನ ವಶಮಾಡಿಕೊಂಡಿದ್ದಾರೆ. ಅಂದಾಜು 31 ಸಾ. ರೂ ಮೌಲ್ಯ ಹೊಂದಿದ್ದ ಮೂರು ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಶಿರಸಿ ಉಪವಿಭಾಗದ ಉಪಾಧೀಕ್ಷಕ ಗಣೇಶ್ ಕೆ.ಎಲ್, ವೃತ್ತನಿರೀಕ್ಷಕ ಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ
ಶಿರಸಿ ನಗರ ಪೊಲೀಸರ ಕಾರ್ಯಕ್ಕೆ ಉತ್ತರ ಕನ್ನಡ ಜಿಲ್ಲಾ ಎಸ್ಪಿ ಎಂ ನಾರಾಯಣ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.