ಸುದ್ದಿ ಕನ್ನಡ ವಾರ್ತೆ
ಪಣಜಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಗೋವಾ ಕನ್ನಡ ಸಮಾಜ ಪಣಜಿ ಇವರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 9ರಂದು ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ಪಣಜಿಯ ಮೆನೇಜಸ್ ಬ್ರಗಾಂಜ ಸಭಾಗ್ರದಲ್ಲಿ ಯಕ್ಷ ಶರಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಳಿಗ್ಗೆ ಶರತೇತು ಬಂಧನ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾಸಂಘ ಹೊನ್ನವಳ್ಳಿ ಕಲಾವಿದರಿಂದ ಶರಸೇತು ಬಂಧನ ಪ್ರಸಂಗ ಜರುಗಿತು.

ಭಾಗವತರಾಗಿ ಸುಬ್ರಹ್ಮಣ್ಯ ಮುಜೆ ಖಾನ್, ಮದ್ದಲೆ ವಾದಕರಾಗಿ, ಗಣೇಶಯ್ಯ ಹೊನ್ನೇಕುಡಿಗೆ, ಚಂಡೇ ವಾದಕರಾಗಿ ಕೃಷ್ಣಮೂರ್ತಿ ನಾಗರಕುಡಿಗೆ, ಅರ್ಜುನನಾಗಿ ಜನಾರ್ದನ ಮುಂಡಗರು, ಹನುಮಂತನಾಗಿ ಅಜಿತ್ ಕಾರಂತ್ ಟಿವಿ, ವೃದ್ಧ ಬ್ರಾಹ್ಮಣರಾಗಿ ಮಹಾಬಲ ಭಟ್ ರವರು ಭಾಗವಹಿಸಿದ್ದರು.