ಚುಚ್ಚಿ ಕನ್ನಡ ವಾರ್ತೆ
ದಾಂಡೇಲಿ : ಜಿಲ್ಲೆಯ ಸಿದ್ದಾಪುರ ತಾಲೂಕಿನ ವರದಿಗಾರ, ಪತ್ರಕರ್ತ ಶಿವಶಂಕರ ಕೋಲಸಿರ್ಸಿ ಅವರ ಅಕಾಲಿಕ ನಿಧನಕ್ಕೆ ದಾಂಡೇಲಿಯ ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.
ಅತ್ಯುತ್ತಮ ಪತ್ರಕರ್ತರಾಗಿ, ಜನಪರ ನಿಲುವಿನ ವ್ಯಕ್ತಿತ್ವದವರಾಗಿದ್ದ ಶಿವಶಂಕರ ಕೋಲಸಿರ್ಸಿ ಅವರು ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಿದ್ದರು. ತಮ್ಮ ಹರಿತವಾದ ಲೇಖನಿಯ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಅತ್ಯಂತ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದ ಶಿವಶಂಕರ ಕೋಲಸಿರ್ಸಿ ಅವರ ಅಕಾಲಿಕ ನಿಧನ ಜಿಲ್ಲೆಯ ಮಾಧ್ಯಮ ಕ್ಷೇತ್ರಕ್ಕೆ ತುಂಬಲಾರದ ಹಾನಿಯಾಗಿದೆ.
ಮೃತರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ಭಗವಂತ ಅನುಗ್ರಹಿಸಲೆಂದು ದಾಂಡೇಲಿಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಂದೇಶ್ ಎಸ್.ಜೈನ್, ಉಪಾಧ್ಯಕ್ಷರಾದ ಕೃಷ್ಣ ಪಾಟೀಲ್, ಪ್ರಧಾನ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ಖಜಾಂಚಿ ಅಕ್ಷಯ ಗೋಸಾವಿ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಯು.ಎಸ್.ಪಾಟೀಲ್ ಹಾಗೂ ಸಂಘದ ಸದಸ್ಯರಾದ ಬಿ.ಎನ್.ವಾಸರೆ, ರಾಜೇಶ ತಳೇಕರ, ಪ್ರವೀಣ್ ಕುಮಾರ್ ಸುಲಾಖೆ ಮತ್ತು ಅಪ್ತಾಭ್ ಶೇಖ ಅವರು ಪ್ರಾರ್ಥಿಸಿ, ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.