ಸುದ್ದಿ ಕನ್ನಡ ವಾರ್ತೆ

ಪಣಜಿ: ರಾಜ್ಯದಲ್ಲಿ ಶೇ.73 ರಷ್ಟು ಶಾಲಾ ಮಕ್ಕಳು ಅಪಾರ್ ಕಾರ್ಡ್‍ಗಳಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಕೇವಲ ಎಂಟು ಶಾಲೆಗಳು ಮಾತ್ರ ಈ ಪ್ರಕ್ರಿಯೆಯನ್ನು ಇನ್ನೂ ಜಾರಿಗೆ ತಂದಿಲ್ಲ. ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಗೋವಾ ದೇಶದಲ್ಲಿ 11 ನೇ ಸ್ಥಾನದಲ್ಲಿದೆ. 95 ರಷ್ಟು ವಿದ್ಯಾರ್ಥಿಗಳನ್ನು ದಾಖಲಿಸುವ ಗುರಿಯನ್ನು ನಾವು ಹೊಂದಿದ್ದೇವೆ, ಆದರೆ ಇದು ಸವಾಲಿನ ಕೆಲಸ ಎಂದು ಗೋವಾ ರಾಜ್ಯ ಶಿಕ್ಷಣ ಇಲಾಖೆಯ ನಿರ್ದೇಶಕ ಶೈಲೇಶ್ ಜಿಂಗ್ಡೆ ಮಾಹಿತಿ ನೀಡಿದ್ದಾರೆ.

 

ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲೀಕರಣವನ್ನು ಉತ್ತೇಜಿಸಲು ಗೋವಾ ಸರ್ಕಾರ ವಿದ್ಯಾರ್ಥಿಗಳಿಗೆ ಹನ್ನೆರಡು ಅಂಕಿಗಳ ಅಪರ ಗುರುತಿನ ಚೀಟಿಗಳನ್ನು ನೀಡುವುದಾಗಿ ಘೋಷಿಸಿತ್ತು. ವಿದ್ಯಾರ್ಥಿಗಳಿಗೆ ಡಿಜಿಟಲ್ ಗುರುತನ್ನು ಒದಗಿಸುವುದು ಮತ್ತು ಅವರ ಶೈಕ್ಷಣಿಕ ದಾಖಲೆಗಳು ಮತ್ತು ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದು ಇದರ ಉದ್ದೇಶವಾಗಿದೆ.

 

ಅಪಾರ್ ಗುರುತಿನ ಚೀಟಿಯನ್ನು ವಿದ್ಯಾರ್ಥಿಯ ಪ್ರಾಥಮಿಕ ಗುರುತಿನ ಚೀಟಿ ಎಂದು ಪರಿಗಣಿಸಲಾಗುತ್ತದೆ. ಈ ಕಾರ್ಡ್ ಅನ್ನು ಶಾಲಾ ವರ್ಗಾವಣೆ ಮತ್ತು ಸ್ಥಳಾಂತರಕ್ಕೆ ಹಾಗೂ ಉಚಿತ ಪಠ್ಯಪುಸ್ತಕಗಳು, ಮಧ್ಯಾಹ್ನದ ಊಟ ಮತ್ತು ಇತರ ಸರ್ಕಾರಿ ಸವಲತ್ತುಗಳಿಗೆ ಬಳಸಲಾಗುತ್ತದೆ.

ರಾಜ್ಯದ 2.99 ಲಕ್ಷ ವಿದ್ಯಾರ್ಥಿಗಳಲ್ಲಿ 2.13 ಲಕ್ಷ ವಿದ್ಯಾರ್ಥಿಗಳು ಅಪಾರ್ ಕಾರ್ಡ್‍ಗಳಿಗೆ ನೋಂದಾಯಿಸಿಕೊಂಡಿದ್ದಾರೆ. ಈ ಸಂಖ್ಯೆಯ ಆಧಾರದ ಮೇಲೆ, ದಾಖಲಾದ ವಿದ್ಯಾರ್ಥಿಗಳ ಸರಾಸರಿ ಸಂಖ್ಯೆ ಶೇಕಡ 73 ಆಗಿದೆ. 1,472 ಶಾಲೆಗಳಲ್ಲಿ ಅಪಾರ್ ಕಾರ್ಡ್‍ಗಳನ್ನು ರಚಿಸುವ ಪ್ರಕ್ರಿಯೆಯು ನಡೆಯುತ್ತಿದೆ ಮತ್ತು ಕೇವಲ ಎಂಟು ಶಾಲೆಗಳು ಮಾತ್ರ ಇನ್ನೂ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ ಎಂದು ಝಿಂಗ್ಡೆ ಮಾಹಿತಿ ನೀಡಿದರು.