ಸುದ್ದಿ ಕನ್ನಡ ವಾರ್ತೆ

ಶಿರಸಿ: ನಮ್ಮನ್ನು ನಾವು ನೋಡಿಕೊಳ್ಳಬೇಕು ಎಂದು ಹೇಳುವುದು ಭಾರತೀಯ ಸಂಸ್ಕೃತಿ ಎಂದು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ‌ ಕೆರೇಕೈ ಹೇಳಿದರು.
ಅವರು ಸಂಸ್ಕಾರ ಭಾರತಿ ಹಮ್ಮಿಕೊಂಡ ಭರತಮುನಿಯ ಸಂಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮನ್ನು ನಾವು ನೋಡಿಕೊಳ್ಳಬೇಕು ಎಂದರೆ ಕನ್ನಡಿ ಬೇಕು. ನಮಗೆ ನಾವೇ ನೋಡಿಕೊಂಡರೆ ಅದುವೇ ನಮ್ಮರಿವು. ಅಥವಾ ನಮ್ಮನ್ನು ನಾವು ನೋಡಿಕೊಳ್ಳಲು ಯೋಗ್ಯ ಗುರು ಬೇಕು. ಆ ಗುರುವೇ‌ ನಮಗೆ ಕನ್ನಡಿ ಆದರೆ ನಮ್ಮ ಬದುಕಿಗೆ ಅದು ಮುನ್ನುಡಿ ಎಂದು ವಿಶ್ಲೇಷಿಸಿದರು‌.
ಹೊರಗಡೆ ಪ್ರಪಂಚವನ್ನು ಒಳಗೆ ಹೊಕ್ಕು ನೋಡಬೇಕು. ಅದನ್ನು ಕಲೆ ಮಾಡುತ್ತದೆ. ಯಾವುದನ್ನು ನಾವು ತೋರಿಸುತ್ತೇವೊ ಅದು ದೃಶ್ಯ. ಆ ದೃಶ್ಯವನ್ನು ಕಲೆ ಕಟ್ಟುತ್ತದೆ. ಆ ಮೂಲಕ ಬಹಿರಂಗದಿಂದ ಅಂತರಂಗ ಯಾತ್ರೆ ಸಾಧ್ಯ ಎಂದರು.

ನಮ್ಮೊಳಗಿನ ಮನಸ್ಸು ಶುದ್ದವಾಗಿರಬೇಕು. ಇದಬ್ನಯ ಋಷಿಮುನಿಗಳು ಹೇಳಿದ್ದಾರೆ. ಋಷಿಗಳ ಸಾಲಿನ ದೊಡ್ಡ ಹೆಸರು ಭರತಮುನಿಗಳು ಎಂದರು.

ಸಂಸ್ಕಾರ ಭಾರತಿ ಜಿಲ್ಲಾ ಅಧ್ಯಕ್ಷ ನೀರ್ನಳ್ಳಿ ರಾಮಕೃಷ್ಣ, ಸಂಸ್ಕಾರ ಇಲ್ಲದೇ ಕಲಾವಿದರು ಇಲ್ಲ. ಕಲಾವಿದರು ಸಂಸ್ಕಾರ ಬಿಟ್ಟು ಹೋಗಲು ಸಾಧ್ಯವೇ ಇಲ್ಲ. ಎಲ್ಲವೂ ಒಂದು ಕಲೆ ಎಂದರು.

ಈ ವೇಳೆ ಸಂಸ್ಕಾರ ಭಾರತಿಯ ರವಿ ಗುನಗ, ಶ್ರೀಪಾದ ಸೋಮನಮನೆ, ಜನಾರ್ಧನ ಆಚಾರ್ಯ, ಸುಕರ್ಮದ ವಿ.ವೆಂಕಟಾಚಲ ಭಟ್ಟ, ಮುತ್ಮುರಡು ವಿನಾಯಕ, ಪ್ರಕಾಶ ಹೆಗಡೆ ಯಡಹಳ್ಳಿ, ಆರ್.ಟಿ.ಭಟ್ ಕಬಗಾಲ್, ವಿಜಯೇಂದ್ರ ಹೆಗಡೆ, ಮನು ಹೆಗಡೆ ಇತರರು ಇದ್ದರು. ಹಳದೀಶ್ ಧ್ಯೇಯಗೀತೆ ಹಾಡಿದರು.

ಪಂಡಿತ್ ಎಂ.ಪಿ.ಹೆಗಡೆ ಪಡಿಗೇರಿ ಅವರ ಗಾಯನ, ವಿದುಷಿ‌ ಸೀಮಾ ಭಾಗವತ್ ಹಾಗೂ ಅವರ ಶಿಷ್ಯರಾದ ಧೃತಿ ಹೆಗಡೆ ಕುಳವೆ, ದೀಪಾ ನಾಯ್ಕ ಅವರಿಂದ
ಭರತನಾಟ್ಯ ಪ್ರದರ್ಶನ ನಡೆಯಿತು. ಇದೇ ವೇಳೆ ನಾಡಿನ ಅಪರೂಪದ ಉಬ್ಬುಚಿತ್ರ ಕಲಾವಿದ ಸತೀಶ ಎಲೆಸರ‌ ಅವರನ್ನು ಗೌರವಿಸಲಾಯಿತು.