ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರಿಗೆ ಸುಮಾರು 4 ದಶಕಗಳಿಂದ ಶ್ರೀಮಠದಲ್ಲಿ, ಸವಾರಿ ಸಂದರ್ಭದಲ್ಲಿ ಶ್ರೀ ಮಠದ ಆರಾಧ್ಯ ದೇವರಾದ ಶ್ರೀ ಲಕ್ಷ್ಮಿನರಸಿಂಹ ದೇವರ ಕೃಪೆಯಿಂದ ಅಂತಃಶುದ್ಧಿ- ಬಾಹ್ಯಶುದ್ಧಿಯಿಂದ ಭಿಕ್ಷಾ ತಯಾರಿ ಸೇವೆ ಮಾಡುತ್ತಿರುವ ಶ್ರೀ ನರಸಿಂಹ ಭಟ್ಟರಿಗೆ ಯಲ್ಲಾಪುರ ತಾಲೂಕಿನ ಬೆಳ್ಳಿಪಾಲಿನಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರು ಸಮ್ಮಾನಿಸಿ ಹರಸಿದರು.

ಶ್ರೀಗಳು ವಿವಿದೆಡೆ ಭಿಕ್ಷಾ ಸೇವೆಗೆ ಸವಾರಿಯ ಸಂದರ್ಭದಲ್ಲಿ ಶೃದ್ಧಾಭಕ್ತಿಯಿಂದ ಭಿಕ್ಷಾ ಸೇವೆಯ ತಯಾರಿಯನ್ನು ಶ್ರೀ ನರಸಿಂಹ ಭಟ್ಟರು ಶೃದ್ಧಾ ಭಕ್ತಿಯಿಂದ ನೆರವೇರಿಸುತ್ತ ಬಂದಿದ್ದಾರೆ.