ಸುದ್ಧಿಕನ್ನಡ ವಾರ್ತೆ
ಶಿರಸಿ: ಕಳೆದ ಜನವರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಜೆಇಇ ಪೇಪರ್ ೨ ಬಿಆರ್ಕ (ಬ್ಯಾಚುಲರ್ ಆರ್ಕಿಟೆಚ್ಚರ್)  ಕರ್ನಾಟಕದ ಟಾಪರ್ ಆಗಿ ಶಿರಸಿಯ ರಕ್ಷಾ ದಿನೇಶ ಹೆಗಡೆ ಹೊರ ಹೊಮ್ಮಿದ್ದಾಳೆ.
ಬೆಂಗಳೂರಿನ ದೀಕ್ಷಾ ಕಾಲೇಜಿ‌ನಲ್ಲಿ  ದ್ವಿತೀಯ ಪಿಯುಸಿ  ಓದುತ್ತಿರುವ ಈಕೆ ಜೆಇಇ ಪೇಪರ್ ೨ ಬಿಆರ್ಕ ಕಷ್ಟಕರವಾದ ಪರೀಕ್ಷೆಯನ್ನು ಎದುರಿಸಿದ್ದಳು. ಇದರಲ್ಲಿ  ೯೯.೯೮೬ ಪರ್ಸಂಟೈಲ್ ಪಡೆದು ಕರ್ನಾಟಕದ ಟಾಪರ್ ಆಗಿದ್ದು ದೇಶ ಮಟ್ಟದಲ್ಲಿ ಟಾಪ್ ೭ ಒಳಗಡೆ ಬಂದಿದ್ದಾಳೆ. ದೇಶ ಮಟ್ಟದಲ್ಲಿ ೬೩ ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ದಾಖಲಿಸಿದ್ದರು. ೪೪ ಸಾವಿರ‌ ಮಕ್ಕಳು  ಪರೀಕ್ಷೆ ಎದುರಿಸಿದ್ದರು‌.
 ಇನ್ನು ರಕ್ಷಾ ಹೆಗಡೆ ದಿನದಲ್ಲಿ ೧೨-೧೩ ತಾಸು ಓದುತ್ತಿದ್ದು, ದೀಕ್ಷಾ ಕಾಲೇಜಿನ ಸಹಕಾರ ಹಾಗೂ ದೆಹಲಿಯ ಎನ್ ಐಸಿಎಸ್  ಇನ್ಸ್ಟಿಟ್ಯೂಟನಲ್ಲಿ ತರಬೇತಿ ಮರೆಯಲು ಸಾಧ್ಯವಿಲ್ಲ. ಜೊತೆಗೆ ನಿರಂತರ ಓದು, ಶ್ರದ್ದೆ, ವ್ಯಾಯಾಮ, ಧ್ಯಾನ, ಆಹಾರದ ಬಗ್ಗೂ‌ ಲಕ್ಷ್ಯ ಈ ಸಾಧನೆಗೆ ಕಾರಣವಾಗಿದೆ ಎಂದು‌ ಪ್ರತಿಕ್ರಿಯೆ ನೀಡಿದ್ದಾಳೆ. ಈಕೆ ಶಿರಸಿಯ‌ ಮಕ್ಕಳ ತಜ್ಞ ಡಾ. ದಿನೇಶ ಹೆಗಡೆ, ವೈದ್ಯೆ ಡಾ. ಸುಮನ್ ಹೆಗಡೆ ಅವರ ಪುತ್ರಿ.
ಶಿರಸಿ‌‌ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ೯ ರ್ಯಾಂಕ್ ಪಡೆದಿದ್ದಳು. ರಾಷ್ಟ್ರ‌ಮಟ್ಟದ ಬ್ಯಾಡ್ಮಿಂಟನ್ ಹಾಗೂ ವಾಲಿಬಾಲ್ ಆಟಗಾರ್ತಿಯಾಗಿ ಗುರುತಾಗಿದ್ದಾಳೆ‌ ಎಂಬುದೂ ಉಲ್ಲೇಖನೀಯ.