ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಗುಳ್ಳಾಪುರದ ಶ್ರೀ ಚಾಮುಂಡೇಶ್ವರಿ ಮೈದಾನದಲ್ಲಿ ಫೆಬ್ರುವರಿ 23 ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಗುಳ್ಳಾಪುರ ಉತ್ಸವ(ಆಲೆಮನೆ ಹಬ್ಬ)2025 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಭಾನುವಾರ ಬೆಳಿಗ್ಗೆ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉಧ್ಘಾಟನೆ, ವಿಚಾರ ಗೋಷ್ಠಿ, ಉಪನ್ಯಾಸ,ಸ್ವರ ಝೇಂಕಾರ, ನೃತ್ಯ ವೈವಿದ್ಯ, ಸಮಾರೋಪ ಸನ್ಮಾನ, ಆರ್ಕೆಸ್ಟ್ರಾ ಸಂಗೀತ, ಕಾರ್ಯಕ್ರಮ ಜರುಗಲಿದೆ.
ಆಲೆಮನೆ ಹಬ್ಬ
ಸಂಜೆ 4 ಗಂಟೆಯಿಂದ ಆಲೆಮನೆ ಹಬ್ಬ ನಡೆಯಲಿದ್ದು ಸ್ಥಳದಲ್ಲಿ ಕುಡಿಯಲು ಉಚಿತ ಕಬ್ಬಿನಹಾಲು ಹಾಗೂ ಸೀಮಿತ ತಿಂಡಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಕಬ್ಬಿನಹಾಲು, ಬಿಸಿ ಬೆಲ್ಲ, ತೊಡೆದೇವು ಮಾರಾಟಕ್ಕೆ ಲಭ್ಯವಿರುತ್ತದೆ.
ಸಂಜೆ 6.30 ರಿಂದ ಸರಿಗಮಪ ಖ್ಯಾತಿಯ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ. ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ.