ಸುದ್ದಿ ಕನ್ನಡ ವಾರ್ತೆ

ಕೊಲ್ಲಾಪುರ :‘ಶಿವಾಜಿ ವಿಶ್ವವಿದ್ಯಾಲಯ’ ಹೆಸರಿನಲ್ಲಿ ‘ಛತ್ರಪತಿ ಶಿವಾಜಿ ಮಹಾರಾಜ’ ಎಂಬ ಶ್ರೇಯೋಭಿವೃದ್ದಿ ಹಾಗೂ ಪೂರ್ಣ ಗೌರವಯುತ ಉಲ್ಲೇಖವಿಲ್ಲದೇ ಇರುವುದರಿಂದ ವರ್ಷಗಳಿಂದ ಶಿವಭಕ್ತರು ಹಾಗೂ ಹಿಂದೂ ಸಂಘಟನೆಗಳಲ್ಲಿ ಅಸಮಾಧಾನವಿದೆ. ಈ ಹಿಂದೆಯೇ ಅನೇಕ ನಗರಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಇತರ ಸ್ಥಳಗಳ ಹೆಸರುಗಳನ್ನು ಛತ್ರಪತಿ ಶಿವಾಜಿ ಮಹಾರಾಜ ಮತ್ತು ಛತ್ರಪತಿ ಸಂಭಾಜಿ ಮಹಾರಾಜ ಅವರ ಪೂರ್ಣ ಗೌರವಯುತ ಹೆಸರಿನಲ್ಲಿ ಮಾರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಹಿಂದೂ ಜನಜಾಗೃತಿ ಸಮಿತಿಯು ಫೆಬ್ರವರಿ 20 ರಂದು ಕೊಲ್ಲಾಪುರದ ಛತ್ರಪತಿ ಶಿವಾಜಿ ಮಹಾರಾಜ್ ಚೌಕ್‌ನಲ್ಲಿ ಆಂದೋಲನ ನಡೆಸಿ, ರಾಜ್ಯ ಸರಕಾರಕ್ಕೆ ‘ಶಿವಾಜಿ ವಿಶ್ವವಿದ್ಯಾಲಯ’ ಹೆಸರನ್ನು ‘ಛತ್ರಪತಿ ಶಿವಾಜಿ ಮಹಾರಾಜ ವಿಶ್ವವಿದ್ಯಾಲಯ’ ಎಂದು ಪರಿವರ್ತಿಸಲು ಆಗ್ರಹಿಸಿದೆ.

ಈ ಆಂದೋಲನದಲ್ಲಿ ಪರಮ ಪೂಜ್ಯ ಕಾಳಿಚರಣ ಮಹಾರಾಜರ ವಂದನೀಯ ಉಪಸ್ಥಿತಿಯಿತ್ತು. ಶಿವಪ್ರತಿಷ್ಠಾನ ಹಿಂದೂಸ್ಥಾನ, ವಿಶ್ವ ಹಿಂದೂ ಪರಿಷತ್, ಹಿಂದೂ ಮಹಾಸಭಾ, ಹಿಂದೂ ಏಕತಾ ಆಂದೋಲನ, ಸನಾತನ ಸಂಸ್ಥೆ, ಮಹಾರಾಷ್ಟ್ರ ಮಂದಿರ ಮಹಾಸಂಘ, ಪತಿತ ಪಾವನ ಸಂಘಟನೆ, ಬಾಲ ಹನುಮಾನ್ ತರುಣ ಮಂಡಳ, ಶಿವಸೇನೆ ಹಾಗೂ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಗುಂಪು ಸೇರಿದಂತೆ ವಿವಿಧ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 

ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಅಪೂರ್ಣವಾಗಿ ಉಲ್ಲೇಖಿಸಿರುವುದು ಅಪಮಾನವಾಗಿದೆ ! – ಶ್ರೀ. ಸುನಿಲ್ ಘನವಟ್

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಹಾಗೂ ಛತ್ತೀಸಗಢ ರಾಜ್ಯ ಸಂಘಟಕರಾದ ಶ್ರೀ. ಸುನಿಲ್ ಘನವಟ್ ಇವರು ಮಾತನಾಡಿ, “ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಐತಿಹಾಸಿಕ ವ್ಯಕ್ತಿತ್ವವಲ್ಲ, ಅವರು ಮಹಾರಾಷ್ಟ್ರದ ಅಸ್ಮಿತೆ ಮತ್ತು ಸ್ವಾಭಿಮಾನದ ಪ್ರತೀಕ. ಅವರ ಹೆಸರನ್ನು ಅಪೂರ್ಣವಾಗಿ ಉಲ್ಲೇಖಿಸುವುದು ಅವರ ಮಹಾನ್ ಕಾರ್ಯಗಳಿಗೆ ಅಪಮಾನ ಮಾಡುವಂತಾಗಿದೆ. 1962ರಲ್ಲಿ ತೆಗೆದುಕೊಂಡ ನಿರ್ಣಯಗಳು ಅಂತಿಮವಾಗುವುದಿಲ್ಲ. 60 ವರ್ಷಗಳ ಹಿಂದಿನ ಕಾರಣಗಳು ಇಂದಿಗೂ ಸ್ವೀಕಾರಾರ್ಹವಲ್ಲ. ಈಗ ಸಮಾಜದ ಭಾವನೆ, ಐತಿಹಾಸಿಕ ಮಹತ್ವ ಮತ್ತು ಸರಕಾರದ ಪ್ರಸ್ತುತ ನೀತಿಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡುವುದು ಅವಶ್ಯಕವಾಗಿದೆ.

 

ಈ ಹಿಂದೆ ಅನೇಕ ಐತಿಹಾಸಿಕ ಸಂಸ್ಥೆಗಳ ಹೆಸರುಗಳು ಬದಲಾಗಿದೆ. 1996ರಲ್ಲಿ ‘ವಿಕ್ಟೋರಿಯಾ ಟರ್ಮಿನಸ್’ ಅನ್ನು ‘ಛತ್ರಪತಿ ಶಿವಾಜಿ ಟರ್ಮಿನಸ್’ ಎಂದು ಬದಲಾಯಿಸಲಾಯಿತು. 2017ರಲ್ಲಿ ಇದನ್ನು ಮತ್ತಷ್ಟು ಗೌರವಯುತವಾಗಿ ‘ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್’ ಎಂದು ಪುನರ್ನಾಮಕರಣ ಮಾಡಲಾಯಿತು. ಅದೇ ರೀತಿ, ‘ಔರಂಗಾಬಾದ್’ ಅನ್ನು ‘ಛತ್ರಪತಿ ಸಂಭಾಜಿನಗರ’ ಎಂದು ಮರುನಾಮಕರಣ ಮಾಡಲಾಯಿತು. ಇದೇ ರೀತಿ ‘ಶಿವಾಜಿ ವಿಶ್ವವಿದ್ಯಾಲಯ’ ಹೆಸರನ್ನು ‘ಛತ್ರಪತಿ ಶಿವಾಜಿ ಮಹಾರಾಜ ವಿಶ್ವವಿದ್ಯಾಲಯ’ ಎಂದು ಏಕೆ ಮಾಡಬಾರದು ? ಈ ಹೆಸರು ಬದಲಾವಣೆಯನ್ನು ಮುಂದಿನ ಬಜೆಟ್ ಅಧಿವೇಶನಕ್ಕೂ ಮುಂಚಿತವಾಗಿ ಜಾರಿಗೊಳಿಸದಿದ್ದಲ್ಲಿ ರಾಜ್ಯವ್ಯಾಪಿ ಆಂದೋಲನ ಆಂದೋಲನ ನಡೆಸಲಾಗುವುದು. ಈ ಬದಲಾವಣೆಗೆ ಯಾರಾದರೂ ವಿರೋಧಿಸುತ್ತಿದ್ದರೆ ಅದು ತೀವ್ರ ಚಿಂತಾಜನಕವಾಗಿದೆ. ಶಿವಾಜಿ ವಿಶ್ವವಿದ್ಯಾಲಯವು ಎಡಪಂಥೀಯ ಚಿಂತನೆಯ ಕೇಂದ್ರವಾಗಿ ಮಾರ್ಪಟ್ಟಿದೆಯಾ ? ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಗೌರವಯುತವಾಗಿ ಉಲ್ಲೇಖಿಸದಿರುವ ‘ಶಿವಾಜಿ ಯಾರು ?’ ಎಂಬ ಪುಸ್ತಕವನ್ನು ವಿಶ್ವವಿದ್ಯಾಲಯದಲ್ಲಿ ಹೇಗೆ ಮಾರಾಟ ಮಾಡಲಾಗುತ್ತಿದೆ ? ಈ ಪುಸ್ತಕದ ಹೆಸರನ್ನು ಕೂಡಲೇ ಬದಲಾಯಿಸಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.

ಹಿಂದೂಗಳು ತಮ್ಮ ಭಕ್ತಿ, ಅಸ್ಮಿತೆ ಮತ್ತು ಮಹಾಪುರುಷರ ಅಪಮಾನವನ್ನು ಎಂದಿಗೂ ಸಹಿಸಬಾರದು ! – ಪರಮ ಪೂಜ್ಯ ಕಾಳಿಚರಣ ಮಹಾರಾಜರು

`ಹಿಂದೂಗಳು ತಮ್ಮ ಶ್ರದ್ಧಾಸ್ಥಾನಗಳು, ಅಸ್ಮಿತೆ ಹಾಗೂ ಮಹಾಪುರುಷರ ಅಪಮಾನವನ್ನು ಯಾವುದೇ ಪರಿಸ್ಥಿತಿಯಲ್ಲೂ ಸಹಿಸಬಾರದು, ಇಂತಹ ಅಪಮಾನಗಳ ವಿರುದ್ಧ ಸಂಘಟಿತವಾಗಿ ವಿರೋಧ ವ್ಯಕ್ತಪಡಿಸಬೇಕು ಮತ್ತು ಅಗತ್ಯವಿದ್ದರೆ ಹೋರಾಟಕ್ಕೂ ಮುಂದಾಗಬೇಕು. ಹಿಂದೂ ಜನಜಾಗೃತಿ ಸಮಿತಿ, ಸನಾತನ ಸಂಸ್ಥೆ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳು ನಡೆಸುತ್ತಿರುವ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಹಿಂದೂಗಳು ನಿರಂತರವಾಗಿ ಕಾರ್ಯನಿರ್ವಹಿಸಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಶ್ರಮಿಸಬೇಕು` ಎಂದರು.