ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಸಂಸ್ಕೃತಿಕ ರಾಯಬಾರಿ, ರಾಜಕೀಯ ಸಾಮಾಜಿಕ ಕ್ಷೇತ್ರಗಳಲ್ಲಿ 50 ವರ್ಷಗಳಿಗೂ ಅಧಿಕಾರದಿಂದ ಅಪೂರ್ವ ಸಾಧನೆ ಮಾಡಿದ್ದನ್ನು ಪರಿಗಣಿಸಿ ಯಲ್ಲಾಪುರದ ಪ್ರಮೋದ್ ಹೆಗಡೆ ರವರಿಗೆ ಸುವರ್ಣ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಸುವರ್ಣ ವಾಹಿನಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮೋದ್ ಹೆಗಡೆ ರವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಿದೆ.

ಪ್ರಮೋದ್ ಹೆಗಡೆಯವರು ಕಳೆದ 37 ವರ್ಷಗಳಿಂದ ಸಂಕಲ್ಪ ಉತ್ಸವವನ್ನು ನಾಡಿನ ಉತ್ಸವವನ್ನಾಗಿ ಮಾಡಿದ ಅಪರೂಪದ ಸಾಧಕರಾಗಿದ್ದಾರೆ. ಕಳೆದ 25 ವರ್ಷಗಳ ಹಿಂದೆ ಯುಕೆ ಸೌಹಾರ್ದ ಸಹಕಾರಿ ಬ್ಯಾಂಕ್ ಸ್ಥಾಪಿಸಿದ ಅವರು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಸ್ ಎಲ್ ಡಿ ಬ್ಯಾಂಕ್ ನಿರ್ದೇಶಕರಾಗಿಯೂ   ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿಯೂ ಜೀಪಂ ಉಪಾಧ್ಯಕ್ಷರಾಗಿಯು ಹಲವು  ಕ್ಷೇತ್ರಗಳಲ್ಲಿ ಪ್ರಮೋದ್ ಹೆಗಡೆ ರವರು ಸಾಧನೆ ಮಾಡಿದ್ದಾರೆ.

ಯಲ್ಲಾಪುರದಲ್ಲಿ ಅಪರೂಪದ ಮೌನ ಗ್ರಂಥಾಲಯ ಸ್ಥಾಪಿಸಿದ ಹಿರಿಮೆ ಇವರದ್ದು.

ಮೈಸೂರು ಕೊಡಗು ಲೋಕಸಭಾ ಸದಸ್ಯ ಹಾಗೂ ಮಹಾರಾಜ ಯದುವೀರ್ ಚಾಮರಾಜ ಒಡೆಯರ್, ಸುವರ್ಣ ವಾಹಿನಿಯ ಪ್ರಧಾನ ಸಂಪಾದಕ ರವಿ ಹೆಗಡೆ, ಚಿತ್ರನಟಿ ಶ್ರುತಿ ನಾಯ್ಡು, ದಾವಣಗೆರೆ ವಿವಿ ಉಪಕುಲಪತಿ ಬಿಡಿ ಕುಂಬಾರ್ ರವರು ಪ್ರಮೋದ್ ಹೆಗಡೆಯವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.