ಪಣಜಿ: ಗೋವಾದ ಸತ್ತರಿ ತಾಲೂಕಿನಲ್ಲಿ ಸೋಮವಾರ ಬೆಳಿಗ್ಗೆಯಿಂದ ಸುರಿದ ಧಾರಾಕಾರ ಮಳೆಗೆ ಸಾಖಳಿ, ಬಿಚೋಲಿ ಭಾಗದಲ್ಲಿ ಮಹಾಪುರವೇ ಸೃಷ್ಠಿಯಾಗಿದೆ. ವಾಳಪೈ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿ ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಗಿದೆ.
ಸೋಮವಾರ ಮಧ್ಯಾನ್ಹದ ನಂತರ ಮಳೆ ಭಾರಿ ಜೋರಾಗಿ ಸುರಿದು ಪ್ರವಾಹ ಸೃಷ್ಠಿಸಿದೆ. ಮಳೆಯ ಪ್ರಮಾಣ ಎಷ್ಟಿತ್ತೆಂದರೆ ವಾಳಪೈಯೊಂದಿಗೆ ಹೊಂಡಾ ಭಾಗದ ರಸ್ತೆಗಳು ಕೂಡ ಸಂಪೂರ್ಣ ಜಲಾವೃತಗೊಡಿದ್ದವು. ರಸ್ತೆಯಲ್ಲಿ ಪ್ರವಾಹದ ರೀತಿಯಲ್ಲಿ ನೀರು ಹರಿದು ಬರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಣೇಶ ಚಚುರ್ಥಿ ಹಬ್ಬಕ್ಕೆ ಇನ್ನೂ ನಾಲ್ಕೇ ದಿನ ಬಾಕಿ ಉಳಿದಿದ್ದು ಹಬ್ಬದ ಖರೀದಿ ಎಲ್ಲೆಡೆ ಜೋರಾಗಿದೆ. ಆದರೆ ಹಬ್ಬಡ ಓಡಾಟಕ್ಕೆ ಭಾರಿ ಮಳೆ ಕೊಂಚ ಅಡ್ಡಿಯಾಗುತ್ತಿದೆ. ಅದೇನೇ ಇದ್ದರೂ ಕೂಡ ಭಾರಿ ಮಳೆಯನ್ನೂ ಲೆಕ್ಕಿಸದೆಯೇ ಜನತೆ ಹಬ್ಬದ ತಯಾರಿಗೆ ಓಡಾಟ ನಡೆಸುತ್ತಿರುವುದು ಕಂಡುಬರುತ್ತಿದೆ.