ಸುದ್ಧಿಕನ್ನಡ ವಾರ್ತೆ
Goa : ಗೋವಾದ ಕವಳೆ ಮಠದ ಆಸ್ತಿಯನ್ನು ನಕಲಿ ದಾಖಲೆ ಸೃಷ್ಠಿಸಿ ವಂಚನೆ ಮಾಡಿ ಮಾರಾಟ ಮಾಡಿದ ಆರೋಪದ ಮೇಲೆ ಪೊಂಡಾ ಪೋಲಿಸರು ದಾಖಲಿಸಿರುವ FIR  ರದ್ಧುಗೊಳಿಸುವಂತೆ ಕೋರಿ ಕವಳೆ ಮಠದ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿಯವರು ಹೈಕೋರ್ಟ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ಹೈಕೋರ್ಟನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮುಗಿಯುವ ವರೆಗೆ ಹೆಚ್ಚಿನ ತನಿಖೆ ನಡೆಸದಂತೆ,ಯಾವುದೇ ಬಲವಂತ ಕ್ರಮ ಕೈಗೊಳ್ಳದಂತೆ ಮತ್ತು ಆರೋಪ ಪಟ್ಟಿ ಸಲ್ಲಿಸದಂತೆ ಪೊಂಡಾ ಪೋಲಿಸರಿಗೆ ಸೂಚನೆ ನೀಡುವಂತೆ ಅರ್ಜಿದಾರರಾದ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಹೈಕೋಟ್ ಈ ಕುರಿತಂತೆ ಗೋವಾ ಸರ್ಕಾರ ಮತ್ತು ಇತರ ಪ್ರತಿವಾಧಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

 

ಏನಿದು ಆರೋಪ….?
ಪೊಂಡಾ ತಾಲೂಕಿನಲ್ಲಿರುವ ಶ್ರೀಮಠದ ಜಮೀನು ಮಾರಾಟ ಮಾಡುವಾಗ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಸ್ವರ್ಗವಾಸಿಗಳಾಗಿರುವ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ಸಹಿ ಮಾಡಿರುವ ಗಂಭೀರ ಆರೋಪ ಮಾಡಿ ಪೊಂಡಾ ಪೋಲಿಸ್ ಠಾಣೆಯಲ್ಲಿ ದೂರು (FIR) ದಾಖಲಾಗಿತ್ತು.
ಗೋವಾದ ಕವಳೆ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಹಾಗೂ ಇನ್ನಿಬ್ಬರ ವಿರುದ್ಧ ಪೋಂಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಯು ಶ್ರೀಗಳ ಶಿಷ್ಯವೃಂದ ಹಾಗೂ ಅನುಯಾಯಿಗಳಲ್ಲಿ ಆತಂಕ ಮನೆ ಮಾಡಿತ್ತು. ಈ ಮಠದ ಶಿಷ್ಯರು ಕರ್ನಾಟಕ ಸೇರಿದಂತೆ ಮುಂಬಯಿಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.