ಸುದ್ಧಿಕನ್ನಡ ವಾರ್ತೆ
Goa : ಶಾಲೆಯೊಂದರ ಎದುರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾಗ ಮಾನವನ ತಲೆಬುರುಡೆಯೊಂದು ಪತ್ತೆಯಾಗಿದೆ. ಪೋಲಿಸ್ ಹಾಗೂ ಫಾರೆನ್ಸಿಕ್ ಟೀಮ್ ಘಟನಾ ಸ್ಥಳಕ್ಕೆ ಆಗಮಿಸಿ ಪಂಚನಾಮೆ ನಡೆಸಿದೆ. ಈ ಪ್ರಕರಣವನ್ನು ಅನೈಸರ್ಗಿಕ ಮೃತ್ಯು ಎಂದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಲೆಯ ಆವರಣದಲ್ಲಿ ಮಾನವನ ತಲೆಬುರುಡೆ ಎಲ್ಲಿಂದ ಬಂತು..? ಎಂದು ಪೋಲಿಸರು ತನಿಖಾ ಕಾರ್ಯ ಕೈಗೊಂಡಿದ್ದಾರೆ.
ಗೋವಾದ ಮಡಗಾಂವ ಫಟೊರ್ಡಾದಲ್ಲಿನ ಅಂಬಾಜಿ ಸರ್ಕಾರಿ ಪ್ರಾಥಮಿಕ ಶಾಲೆಯ ಎದುರಿನ ಜಾಗದ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಮಾನವನ ತಲೆಬುರುಡೆ ಹಾಗೂ ಎರಡು ಎಲುಬುಗಳು ಪತ್ತೆಯಾಗಿದೆ. ಪೋಲಿಸರು ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.