ಸುದ್ದಿ ಕನ್ನಡ ವಾರ್ತೆ

ಶಿರಸಿ:ಅಮೇರಿಕಾದಲ್ಲಿ ಚಿಕಿತ್ಸೆ ಪಡೆದು ತವರಿಗೆ ಆಗಮಿಸಿದ್ದ ಹೆಸರಾಂತ ಚಲನಚಿತ್ರ ನಟ ಡಾ.ಶಿವರಾಜಕುಮಾರ ಅವರು ೨೯ ವರ್ಷಗಳ ಬಳಿಕ ಜಗತ್ ಪ್ರಸಿದ್ಧ ಯಾಣಕ್ಕೆ ಭೇಟಿ‌ ವೀಕ್ಷಣೆ ನಡೆಸಿದರು.

ಕಳೆದ ಎರಡು ದಿನಗಳಿಂದ ಶಿರಸಿಯಲ್ಲಿ ವಿಶ್ರಾಂತಿಗಾಗಿ ವಾಸ್ತವ್ಯ ಮಾಡಿದ್ದು, ಬಿಡುವಿನ ವೇಳೆಯಲ್ಲಿ ಪ್ರವಾಸಿ ತಾಣ ಯಾಣಕ್ಕೆ ಪತ್ನಿ ಗೀತಾ‌ ಶಿವರಾಜಕುಮಾರ, ಶಾಸಕ ಭೀಮಣ್ಣ ನಾಯ್ಕ ಅವರ ಪುತ್ರ ಅಶ್ವಿನ್ ಭೀಮಣ್ಣ ಹಾಗೂ ಸ್ನೇಹಿತರೊಂದಿಗೆ ತೆರಳಿ ಯಾಣ ಪ್ರದೇಶದಲ್ಲಿ ಸುತ್ತಾಟ ನಡೆಸಿದತು. ಯಾಣದ ಶಿಖರಗಳನ್ನು ವೀಕ್ಷಿಸಿ ಪೃಕೃತಿ ಸೌಂದರ್ಯ ಆಸ್ವಾದಿಸಿ ಫೊಟೊ ಕೂಡ ಕ್ಲಿಕ್ಕಿಸಿಕೊಂಡರು.
ನಮ್ಮೂರ ಮಂದಾರ ಹೂವೆ ಚಲನಚಿತ್ರ ಚಿತ್ರಿಕರಣದ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿದ್ದ ಅವರು ಹಳೆಯ‌ ನೆನಪು ಮಾಡಿಕೊಂಡರು.ಇನ್ನು ಲಿಂಗನಮಕ್ಕಿ ಪ್ರದೇಶಕ್ಕೂ ತೆರಳಿದರು.