ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಫೆಬ್ರುವರಿ 1 ರಂದು ಸಂಜೆ 5 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಾಗೋಡಿನಲ್ಲಿ ಆಲೆಮನೆ ಹಬ್ಬ ಆಯೋಜಿಸಲಾಗಿದೆ. ಫೆಬ್ರುವರಿ 1 ರಂದು ಮಾಗೋಡು ಕಾಲೋನಿಯಲ್ಲಿ ಆಲೆಮನೆ ಹಬ್ಬ ನಡೆಯಲಿದೆ. ಕಳೆದ ಏಳು ವರ್ಷಗಳಿಂದ ಯಲ್ಲಾಪುರದ ಮಾಗೋಡಿನಲ್ಲಿ ಪ್ರಪ್ರಥಮವಾಗಿ ಆರಂಭಗೊಂಡ ಆಲೆಮನೆ ಹಬ್ಬ ಪ್ರಸಕ್ತ 8 ನೇಯ ವರ್ಷದ ಹಬ್ಬವಾಗಿದೆ.

ಮಾಗೋಡು ಆಲೆಮನೆ ಹಬ್ಬದ ಹಿನ್ನೆಲೆಯಲ್ಲಿ ತಯಾರಿ ಜೋರಾಗಿ ನಡೆಯುತ್ತಿದೆ. ಅಂದು ತಾಜಾ ಕಬ್ಬಿನ ಹಾಲಿನೊಂದಿಗೆ ಮಿರ್ಚಿ,ಮಂಡಕ್ಕಿ, ಸೇರಿ ಬಗೆ ಬಗೆಯ ಖಾದ್ಯಗಳು ಈ ಹಬ್ಬದಲ್ಲಿರಲಿದೆ. ಅಂದು ರಾತ್ರಿ 10 ಗಂಟೆಯ ವರೆಗೂ ವಿವಿಧ ಮನೋರಂಜನಾ ಕಾರ್ಯಕ್ರಮ ಕೂಡ ನಡೆಯಲಿದೆ. ಸಮೀಪದ ಮಾರುತಿ ಮಂದಿರದಲ್ಲಿ ಪೂಜೆ ಸಲ್ಲಿಸಿ ಭವ್ಯ ಮೆರವಂಇಗೆಯನ್ನು ಕೂಡ ಆಯೋಜಿಸಲಾಗಿದೆ.

ಪ್ರಸಕ್ತ ವರ್ಷದ ಆಲೆಮನೆ ಹಬ್ಬದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರತ್ಯೇಕ ಎರಡು ಗಾಣಗಳ ಮೂಲಕ ಕಬ್ಬಿನ ಹಾಲು ಸಿದ್ಧಪಡಿಸಿ 4 ಕೌಂಟರ್ ಗಳಲ್ಲಿ ಕಬ್ಬಿನ ಹಾಲು ಉಚಿತವಾಗಿ ವಿತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಎಲ್ಲ ವ್ಯವಸ್ಥೆಗಳಿಗಾಗಿ ಆಲೆಮನೆ ಹಬ್ಬ ಸಮೀತಿಯ ನೂರಾರು ಕಾರ್ಯಕರ್ತರು ಶೃಮಿಸುತ್ತಿದ್ದಾರೆ. ನರಸಿಂಹ ಭಟ್ ಕುಂಕಿಮನೆ ರವರ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪೂರ್ವಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ.

ಕಬ್ಬಿನ ಹಾಲಿನ ಜೊತೆಗೆ ಕಬ್ಬಿನ ಹಾಲಿನ ಉತ್ಪನ್ನಗಳ ಮಾರಾಟ ಕೂಡ ನಡೆಯಲಿದೆ. ತೊಡೆದೇವು, ಜೋನಿಬೆಲ್ಲ, ಸೇರಿ ಬಗೆ ಬಗೆಯ ಖಾದ್ಯಗಳು ನಿಮಗಾಗಿ ಕಾಯುತ್ತಿದೆ, ಮರೆಯದೆಯೇ ನೀವು ಬನ್ನಿ…. ನಿಮ್ಮರನ್ನೂ ಕರೆತಂದು ಆಲೆಮನೆ ಹಬ್ಬದ ಸವಿಯನ್ನು ಸವಿಯಿರಿ.